ಕರ್ನಾಟಕ

karnataka

ETV Bharat / sports

ಕಾಮನ್‌ವೆಲ್ತ್ ಗೇಮ್ಸ್‌ ಆರಂಭ: ಭಾರತದ ಕ್ರೀಡಾಪಟುಗಳ ಇಂದಿನ ವೇಳಾಪಟ್ಟಿ ಹೀಗಿದೆ..

2010ರಲ್ಲಿ 38 ಚಿನ್ನದೊಂದಿಗೆ 101 ಪದಕ ಗೆದ್ದಿರುವುದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಈವರೆಗಿನ ಅತ್ಯುತ್ತಮ ಸಾಧನೆ.

Commonwealth Games 2022  India Full Schedule  India Full Schedule in Commonwealth Games  Commonwealth Games news  ಕಾಮನ್‌ವೆಲ್ತ್ ಗೇಮ್ಸ್‌ 2022  ಇಂದಿನ ಭಾರತ ಕ್ರೀಡಾಪಟುಗಳ ವೇಳಾ ಪಟ್ಟಿ ಇಲ್ಲಿದೆ ನೋಡಿ  ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳ ವೇಳಾಪಟ್ಟಿ  ಕಾಮನ್‌ವೆಲ್ತ್ ಗೇಮ್ಸ್‌ ಸುದ್ದಿ
ಕೃಪೆ: Twitter

By

Published : Jul 29, 2022, 11:38 AM IST

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನ 22ನೇ ಆವೃತ್ತಿಯು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಿದೆ. ಮುಂದಿನ 11 ದಿನಗಳವರೆಗೆ ಅಂದರೆ ಆಗಸ್ಟ್ 8 ರವರೆಗೆ ಕ್ರೀಡಾ ಹಬ್ಬ ಮುಂದುವರಿಯಲಿದೆ. ಕ್ರೀಡಾಕೂಟದ ಮೊದಲ ದಿನವಾದ ಇಂದು ಹಾಕಿ, ಮಹಿಳಾ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್‌ ಸ್ಪರ್ಧೆಗಳು ನಡೆಯಲಿವೆ. ಮೊದಲ ದಿನದ ಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ (ಭಾರತೀಯ ಕಾಲಮಾನಗಳಲ್ಲಿ)

  • ಮಧ್ಯಾಹ್ನ 1 ಕ್ಕೆ ಲಾನ್ ಬೌಲ್- ಮಹಿಳೆಯರ ವಿಭಾಗೀಯ ಆಟದ ಸುತ್ತು 1, ತಾನಿಯಾ ಚೌಧರಿ
  • ಮಧ್ಯಾಹ್ನ 1 ಕ್ಕೆ ಲಾನ್ ಬೌಲ್- ತ್ರಿಬಲ್​ ಸೆಕ್ಷನಲ್ ಪ್ಲೇ ರೌಂಡ್ 1 ರಲ್ಲಿ ಭಾರತ vs ನ್ಯೂಜಿಲೆಂಡ್ ಮಧ್ಯೆ ಸೆಣಸಾಟ.
  • ಮಧ್ಯಾಹ್ನ 2 ಕ್ಕೆ ಟೇಬಲ್ ಟೆನಿಸ್ - ಭಾರತ vs ದಕ್ಷಿಣ ಆಫ್ರಿಕಾ, ಗುಂಪು 2
  • ಮಧ್ಯಾಹ್ನ 3 ಕ್ಕೆ ಈಜು - 400 ಮೀ ಪುರುಷರ ಫ್ರೀಸ್ಟೈಲ್ ಹೀಟ್‌, ಕುಶಾಗ್ರಾ ರಾವತ್
  • ಮಧ್ಯಾಹ್ನ 3.25ಕ್ಕೆ ಸೈಕ್ಲಿಂಗ್ - ಪುರುಷರ 400 ಮೀ ಟೀಮ್ ಪರ್ಸ್ಯೂಟ್ ಅರ್ಹತೆ ಸುತ್ತು
  • ಮಧ್ಯಾಹ್ನ 3.30ಕ್ಕೆ ಕ್ರಿಕೆಟ್ - ಭಾರತ vs ಆಸ್ಟ್ರೇಲಿಯಾ, ಗುಂಪು ಎ
  • ಮಧ್ಯಾಹ್ನ 3.31ಕ್ಕೆ ಟ್ರಯಥ್ಲಾನ್ - ಪುರುಷರ ವೈಯಕ್ತಿಕ ಸ್ಪ್ರಿಂಟ್ ದೂರ, ಆದರ್ಶ್ ಮತ್ತು ವಿಶ್ವನಾಥ್
  • ಸಂಜೆ 4 ಕ್ಕೆ ಲಾನ್ ಬೌಲ್ - ಪುರುಷರ ತ್ರಿಪಲ್ ಸೆಕ್ಷನಲ್ ಪ್ಲೇ ರೌಂಡ್ 2, ಭಾರತ vs ಸ್ಕಾಟ್ಲೆಂಡ್
  • ಸಂಜೆ 4ಕ್ಕೆ ಲಾನ್ ಬೌಲ್ - ಮಹಿಳೆಯರ ವಿಭಾಗೀಯ ಆಟದ ಸುತ್ತು 2, ತಾನಿಯಾ ಚೌಧರಿ
  • ಸಂಜೆ 4.03ಕ್ಕೆ ಈಜು - ಪುರುಷರ 50 ಮೀ ಬಟರ್‌ಫ್ಲೈ ಹೀಟ್‌, ಸಜನ್ ಪ್ರಕಾಶ್
  • ಸಂಜೆ 4.12ಕ್ಕೆ ಸೈಕ್ಲಿಂಗ್ - ಮಹಿಳಾ ತಂಡ ಸ್ಪ್ರಿಂಟ್ ಅರ್ಹತೆ ಸುತ್ತು
  • ಸಂಜೆ 4.29ಕ್ಕೆ ಈಜು - ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಹೀಟ್, ಶ್ರೀಹರಿ ನಟರಾಜ್
  • ಸಂಜೆ 4.30ಕ್ಕೆ ಟೇಬಲ್ ಟೆನಿಸ್ - ಭಾರತ vs ಬಾರ್ಬಡೋಸ್ ಗುಂಪು 3
  • ಸಂಜೆ 4.30ಕ್ಕೆ ಜಿಮ್ನಾಸ್ಟಿಕ್ಸ್ - ಪುರುಷರ ಆರ್ಟಿಸ್ಟಿಕ್​ ಅರ್ಹತೆ, ಯೋಗೇಶ್ವರ್ ಸಿಂಗ್, ಸತ್ಯಜಿತ್ ಮೊಂಡಲ್, ಸೈಫ್ ತಾಂಬೋಲಿ
  • ಸಂಜೆ 4.46ಕ್ಕೆ ಸೈಕ್ಲಿಂಗ್ - ಪುರುಷರ ತಂಡ ಸ್ಪ್ರಿಂಟ್ ಅರ್ಹತೆ
  • ಸಂಜೆ 5 ಕ್ಕೆ ಬಾಕ್ಸಿಂಗ್ - 32 ರ ಸುತ್ತಿನಲ್ಲಿ ಶಿವ ಥಾಪಾ ಪಂದ್ಯ
  • ಸಂಜೆ 6.30ಕ್ಕೆ: ಬ್ಯಾಡ್ಮಿಂಟನ್ - ಭಾರತ vs ಪಾಕಿಸ್ತಾನ, ಮಿಶ್ರ ಡಬಲ್ಸ್
  • ಸಂಜೆ 6.30ಕ್ಕೆ ಮಹಿಳೆಯರ ಹಾಕಿ - ಭಾರತ vs ಘಾನಾ
  • ರಾತ್ರಿ 7ಕ್ಕೆ ಟ್ರಯಥ್ಲಾನ್ - ಮಹಿಳೆಯರ ವೈಯಕ್ತಿಕ ಸ್ಪ್ರಿಂಟ್ ದೂರ, ಸಂಜನಾ ಮತ್ತು ಪ್ರಜ್ಞಾ ಮೋಹನ್ ಭಾಗಿ
  • ರಾತ್ರಿ 7.30ಕ್ಕೆ ಲಾನ್ ಬೌಲ್ - ಮಹಿಳೆಯರ ಫೋರ್ಸ್ ವಿಭಾಗೀಯ ಆಟ ರೌಂಡ್ ಆಫ್ 32, ಇಂಡಿಯಾ vs ಕುಕ್ ಐಲ್ಯಾಂಡ್ಸ್
  • ರಾತ್ರಿ 8.30ಕ್ಕೆ ಟೇಬಲ್ ಟೆನ್ನಿಸ್ - ಭಾರತ vs ಫಿಜಿ, ಮಹಿಳೆಯರ ಗುಂಪು 2 ಪಂದ್ಯ
  • ರಾತ್ರಿ 9.50ಕ್ಕೆ ಸೈಕ್ಲಿಂಗ್ - ಪುರುಷರ ತಂಡ 4000ಮೀ. ಪರ್ಸ್ಯೂಟ್ ಫೈನಲ್
  • ರಾತ್ರಿ 10.25 ಕ್ಕೆಸೈಕ್ಲಿಂಗ್ - ಮಹಿಳೆಯರ ತಂಡ 4000ಮೀ ಪರ್ಸ್ಯೂಟ್ ಫೈನಲ್
  • ರಾತ್ರಿ 10:30ಕ್ಕೆ ಲಾನ್ ಬೌಲ್ - ಭಾರತ vs ಫಾಕ್ಲ್ಯಾಂಡ್ ದ್ವೀಪಗಳು, ಪುರುಷರ ಜೋಡಿ ವಿಭಾಗೀಯ ಆಟ 2 ರೌಂಡ್
  • ರಾತ್ರಿ 10.33 ಕ್ಕೆ ಸೈಕ್ಲಿಂಗ್ - ಪುರುಷರ ತಂಡ ಸ್ಪ್ರಿಂಟ್ ಫೈನಲ್
  • ರಾತ್ರಿ 11ಕ್ಕೆ ಟೇಬಲ್ ಟೆನಿಸ್ - ಭಾರತ vs ಸಿಂಗಾಪುರ, ಪುರುಷರ ತಂಡ ಗುಂಪು 3
  • ರಾತ್ರಿ 11ಕ್ಕೆ ಸ್ಕ್ವಾಷ್ - ಅನಾಹತ್ ಸಿಂಗ್, ಮಹಿಳೆಯರ ಸಿಂಗಲ್ ರೌಂಡ್ 64
  • ರಾತ್ರಿ 11:45 ಕ್ಕೆ ಸ್ಕ್ವಾಷ್ - ಅಭಯ್ ಸಿಂಗ್, ಪುರುಷರ ಸಿಂಗಲ್ ರೌಂಡ್ 64

ABOUT THE AUTHOR

...view details