ಬದ್ಗಾಂ(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರ ಎಂದಾಕ್ಷಣ ನೆನಪಾಗುವುದು ಗುಂಡಿನ ಸದ್ದು. ಭಯೋತ್ಪಾದಕರ ಉಪಟಳ. ಈ ಎಲ್ಲ ಸಮಸ್ಯೆ ಎದುರಿಸಿ ಈ ಪ್ರದೇಶದಿಂದ ಬೆರಳೆಣಿಕೆಯಷ್ಟು ಮಾತ್ರ ಕ್ರೀಡಾ ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ಇದೀಗ ಅದೇ ಸಾಲಿನಲ್ಲಿ 19 ವರ್ಷದ ಕಾಶ್ಮೀರಿ ಯುವತಿ ಸಲ್ಬೀನಾ ಶಲ್ಲಾ ಕೂಡ ಇದ್ದಾರೆ. ವೇಟ್ ಲಿಫ್ಟರ್ ಆಗಿರುವ ಇವರು ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿನಿಧಿಸುವ ಕನಸು ಕಾಣ್ತಿದ್ದಾರೆ.
ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿನಿಧಿಸುವ ಕನಸು ಕಾಣುತ್ತಿರುವ 19 ವರ್ಷದ ಕಾಶ್ಮೀರಿ ಯುವತಿ ಸಲ್ಬೀನಾ ಶಲ್ಲಾ ಪ್ರತಿದಿನ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಅವರಿಗೆ ಕೋಚ್ ಶೌಕತ್ ಮಜೀದ್ ತರಬೇತಿ ನೀಡ್ತಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿನಿಧಿಸಿ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಇವರಿಗೆ ಸ್ಫೂರ್ತಿಯಾಗಿದ್ದು, ಅವರಂತೆ ದೇಶಕ್ಕಾಗಿ ಪದಕ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಮೂಲತಃ ಜಮ್ಮು-ಕಾಶ್ಮೀರದ ಬದ್ಗಾಂನವರಾಗಿರುವ ಸಲ್ಬೀನಾ ಕಠಿಣ ತರಬೇತಿ ಪಡೆಯುತ್ತಿದ್ದಾರೆ.