ಬಥಿಂಡಾ (ಪಂಜಾಬ್): ಬ್ರೆಜಿಲ್ನಲ್ಲಿ ನಡೆದ ಕಿವುಡರ ಒಲಿಂಪಿಕ್ ಗೇಮ್ಸ್ನಲ್ಲಿ ಬಥಿಂಡಾದ ಶ್ರೇಯಾ ಬ್ಯಾಡ್ಮಿಂಟನ್ ತಂಡದಲ್ಲಿ ಆಡುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಶ್ರೇಯಾ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಪಂಜಾಬ್ ರಾಜ್ಯದ ಏಕೈಕ ವಿಕಲಚೇತನ ಆಟಗಾರ್ತಿ. ಮೇ 2ರಿಂದ 4ರವರೆಗೆ ನಡೆದ ಪಂದ್ಯಗಳಲ್ಲಿ ಶ್ರೇಯಾ ಭಾಗವಹಿಸಿದ್ದು, ಏಪ್ರಿಲ್ 27ರಂದು ಡೆಫ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಬ್ರೆಜಿಲ್ಗೆ ತೆರಳಿದ್ದರು.
ಶ್ರೇಯಾ ಅವರು ಬಾಲ್ಯದಿಂದಲೂ ಕಿವುಡರಾಗಿದ್ದಾರೆ. ಆಕೆಗೆ ಪ್ರಾರಂಭದಿಂದಲೂ ಬ್ಯಾಡ್ಮಿಂಟನ್ ಆಟದಲ್ಲಿ ಒಲವು ಇತ್ತು. 7ನೇ ವಯಸ್ಸಿನಿಂದಲೇ ಈಕೆ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದಾರೆ ಎಂದು ಶ್ರೇಯಾ ತಂದೆ ದೇವಿಂದರ್ ಕುಮಾರ್ ಸಿಂಗ್ಲಾ ಹೇಳಿದರು.