ಬರ್ಮಿಂಗ್‌ಹ್ಯಾಮ್(ಯುಕೆ):ಕಾಮನ್ವೆಲ್ತ್ ಗೇಮ್ಸ್ನ ಗುಂಪು ಹಂತದ ಬ್ಯಾಡ್ಮಿಂಟನ್ನಲ್ಲಿ ಭಾರತ ನಿರಾಸೆ ಅನುಭವಿಸಿದೆ. ಮಂಗಳವಾರ ನಡೆದ ಫೈನಲ್ಸ್ನಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ 1-3 ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟಿತು.
ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಮಲೇಷ್ಯಾದ ಕೆಳಕ್ರಮಾಂಕದ ಆಟಗಾರ ತ್ಸೆ ಯಾಂಗ್ ಜಿ ವಿರುದ್ಧ ಸೋಲು ಅನುಭವಿಸಿದರು. ಇದು ತಂಡದ ಸೋಲಿಗೆ ಕಾರಣವಾಯಿತು. ಇದಲ್ಲದೇ, ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಸೋಲನುಭವಿಸಿದರು. ಇದರಿಂದ ತಂಡ 2-0 ಯಿಂದ ಹಿನ್ನಡೆ ಪಡೆಯಿತು. ಮಹಿಳಾ ಸಿಂಗಲ್ಸ್‌ನಲ್ಲಿ ಮಲೇಷ್ಯಾದ ಗೋಹ್ ಜಿನ್ ವೀ ಅವರು, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧುಗೆ ಸುಲಭ ತುತ್ತಾದರು.
ಮೊದಲು ನಡೆದ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಒಲಿಂಪಿಕ್ ಕಂಚಿನ ಪದಕ ವಿಜೇತ ಜೋಡಿಯಾದ ಮಲೇಷ್ಯಾದ ಟೆಂಗ್ ಫಾಂಗ್ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಎದುರಿಸಿತು. ಕಠಿಣ ಸವಾಲು ಒಡ್ಡಿದ ಚಿಯಾ ಸೋಹ್ ಜೋಡಿ ಭಾರತದ ಎದುರು 21-18, 21-15 ನೇರ ಸೆಟ್ಗಳಿಂದ ಪಂದ್ಯ ಜಯಿಸಿತು. ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಸಿಂಧುಗೆ ಜಯ:ಬಳಿಕ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು, ಗೋಹ್ ಜಿನ್ ವೀ ಸವಾಲು ಎದುರಿಸಿದರು. 22-20, 21-17 ನೇರ ಸೆಟ್ಗಳಿಂದ ಸಿಂಧು ಜಯಿಸುವ ಮೂಲಕ 1-1 ರಲ್ಲಿ ಸಮಬಲ ಮಾಡಿದರು. ವಿಶ್ವ ಕ್ರಮಾಂದಲ್ಲಿ 40 ನೇ ಸ್ಥಾನದಲ್ಲಿದ್ದ ಮಲೇಷ್ಯಾದ ಗೋಹ್, 7 ನೇ ಕ್ರಮಾಂಕದಲ್ಲಿರುವ ಸಿಂಧುಗೆ ಕಠಿಣ ಸವಾಲು ಒಡ್ಡಿದರು.