ಪಾಣಿಪತ್ (ಹರಿಯಾಣ) :ನೀರಜ್ ಚೋಪ್ರಾ.. ಸದ್ಯದ ಕ್ರೀಡಾ ಜಗತ್ತಿನ ಐಕಾನ್. ಚೋಪ್ರಾ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದ್ದು, ಪ್ರತಿ ಕೂಟದಲ್ಲೂ ಅವರು ಚಿನ್ನದ ಪದಕ ಪಡೆಯುತ್ತಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಕ್ಕೆ ಭರ್ಚಿ ಎಸೆದಿದ್ದರು. ಫೈನಲ್ನಲ್ಲಿ 88.88 ಮೀಟರ್ಗಳ ದೂರ ಜಾವೆಲಿನ್ ಎಸೆಯುವ ಮೂಲಕ ಪದಕ ಸಾಧನೆ ಮಾಡಿದ್ದರು. ತಮ್ಮ ಮುಂದಿನ ಗುರಿ ಮತ್ತು ಕ್ರೀಡೆಯ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.
ನಮಗೆ ನಮ್ಮ ಮೇಲೆ ನಂಬಿಕೆ ಮುಖ್ಯವಾಗಿರಬೇಕು. ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಾಂಪಿಯನ್ ಆಗುವ ಪ್ರಯಾಣವು ಬಹಳಷ್ಟು ಕಠಿಣ ಪರಿಶ್ರಮವನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬ ಆಟಗಾರನಂತೆ ನಾನು ದೇಶವನ್ನು ಪ್ರತಿನಿಧಿಸುವ ಮತ್ತು ಪದಕಗಳನ್ನು ಗಳಿಸುವ ಕನಸು ಹೊಂದಿದ್ದೆ. ನನ್ನ ಪ್ರಯತ್ನಗಳು ಆ ಗುರಿಯನ್ನು ಸಾಧಿಸಲು ನೆರವಾದರು ಎಂದು ಚೋಪ್ರಾ ಅಭಿಪ್ರಾಯಪಟ್ಟರು.
ಒಲಿಂಪಿಕ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಅದು ಅವರ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದೆ. ಕುಟುಂಬದ ಸದಸ್ಯರ ಬೆಂಬಲ ಅಗಾಧವಾಗಿದೆ. ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಯಶಸ್ಸಿನಲ್ಲಿ ಕುಟುಂಬ ಪ್ರಮುಖ ಪಾತ್ರ ಬಹುಮುಖ್ಯವಾಗಿದೆ ಎಂದು ನೀರಜ್ ಹೇಳಿದರು.
ಬದಲಾದ ಕ್ರೀಡಾ ಸನ್ನಿವೇಶಗಳು:ಭಾರತೀಯ ಜಾವೆಲಿನ್ ಸನ್ನಿವೇಶ ಬಹಳಷ್ಟು ಬದಲಾಗುತ್ತಿದೆ. ನಾನು ಯುವಕರಿಗೆ ಸಲಹೆ ನೀಡೋದೇನೆಂದರೆ, ನಾವು ಪದಕಗಳನ್ನು ಗೆದ್ದಾಗ ಅದು ತರುವ ಪ್ರಚಾರದ ಹಿಂದೆ ಬೀಳಬಾರದು. ಆಟದಲ್ಲಿರುವ ಆಸಕ್ತಿಯಿಂದ ಮಾತ್ರ ಕ್ರೀಡೆಯಲ್ಲಿ ಮುಂದುವರಿಯಬೇಕು. ಪ್ರತಿಯೊಬ್ಬರೂ ಉತ್ಸಾಹದಲ್ಲಿ ಕೆಲಸ ಮಾಡಬೇಕು. ಕ್ರೀಡೆಯು ಜೀವನದ ಪ್ರಮುಖ ಅಂಶವಾಗಿದ್ದು, ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಒಂದು ಗಂಟೆ ಸಮಯವನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.