ಕರ್ನಾಟಕ

karnataka

ETV Bharat / sports

'ಅರ್ಜುನ ಪ್ರಶಸ್ತಿ' ವಿಜೇತ ಟೇಬಲ್‌ ಟೆನ್ನಿಸ್‌ ಆಟಗಾರ ವಿ.ಚಂದ್ರಶೇಖರ್ ಕೊರೊನಾಗೆ ಬಲಿ - ಅರ್ಜುನ ಪ್ರಶಸ್ತಿ

ಟೇಬಲ್​ ಟೆನ್ನಿಸ್​ ಆಟದಲ್ಲಿ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿ ಗಳಿಸಿದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ಆಟಗಾರ ವಿ.ಚಂದ್ರಶೇಖರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

V Chandrasekhar d
ವಿ. ಚಂದ್ರಶೇಖರ್

By

Published : May 12, 2021, 1:06 PM IST

ಚೆನ್ನೈ:ಭಾರತದ ಮಾಜಿ ಟೇಬಲ್ ಟೆನ್ನಿಸ್ ಆಟಗಾರ ವಿ.ಚಂದ್ರಶೇಖರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

64 ವರ್ಷದ ಚಂದ್ರಶೇಖರ್​, ಟೇಬಲ್​ ಟೆನ್ನಿಸ್​ ಆಟದಲ್ಲಿ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿ ಗಳಿಸಿದ್ದರು. 1982ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದ ಸೆಮಿಫೈನಲ್ ತಲುಪಿದ್ದ ಚೆನ್ನೈ ಮೂಲದ ಆಟಗಾರ ಒಬ್ಬ ಯಶಸ್ವಿ ತರಬೇತುದಾರರು ಕೂಡ ಹೌದು. 1984ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಇವರು, ಆ ನಂತರ ಕ್ರೀಡಾ ಬದುಕು ಮೊಟಕುಗೊಳಿಸಿದರು.

ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಚಲನಶೀಲತೆ, ಮಾತು ಮತ್ತು ದೃಷ್ಟಿಯನ್ನು ಇವರು ಕಳೆದುಕೊಂಡರು. ಪರಿಸ್ಥಿತಿ ಹೀಗಿದ್ದರೂ ಸಂಕಷ್ಟದ ವಿರುದ್ಧ ಹೋರಾಡಿ, ಇತರರಿಗೆ ತರಬೇತಿ ನೀಡುತ್ತಾ ತಮ್ಮ ಉತ್ಸಾಹವನ್ನು ಮರೆಮಾಡದೆ ಮುಂದುವರೆದರು. ಶಸ್ತ್ರಚಿಕಿತ್ಸೆಯ ಬಳಿಕ ತನಗಾದ ಅಡ್ಡ ಪರಿಣಾಮಗಳಿಂದ ಕೋಪಗೊಂಡ ಅವರು, ಆಸ್ಪತ್ರೆಯ ವಿರುದ್ಧ ಕಾನೂನು ಹೋರಾಟವನ್ನೂ ನಡೆಸಿದ್ದರು. ಬಳಿಕ ತೀರ್ಪು ಇವರ ಪರವಾಗಿಯೇ ಬಂದಿತ್ತು.

ಚಂದ್ರಶೇಖರ್​ ಅವರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ. ಚೆನ್ನೈನಲ್ಲಿನ ಟೇಬಲ್ ಟೆನಿಸ್ ಸಂಸ್ಥೆಯು ಇವರ ಸಾವಿಗೆ ಸಂತಾಪ ಸೂಚಿಸಿದೆ.

ABOUT THE AUTHOR

...view details