ನವದೆಹಲಿ:ದೇಶವ್ಯಾಪಿ ಆವರಿಸಿಕೊಂಡಿರುವ ಕೊರೊನಾ ಸಾಂಕ್ರಾಮಿಕ ರೋಗ ಕಡಿಮೆಯಾದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ದೇಶಿ ಸ್ಪರ್ಧೆಗಳನ್ನು ಆಯೋಜಿಸಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ನಿರ್ಧರಿಸಿದೆ.
ನಾವು 2020 ಸೆಪ್ಟೆಂಬರ್-ಆಕ್ಟೋಬರ್ನಲ್ಲಿ ಡೊಮೆಸ್ಟಿಕ್ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಎಎಫ್ಐ ಅಧ್ಯಕ್ಷ ಆದಿಲ್ಲೆ ಜೆ. ಸುಮರಿವಾಲ್ಲಾ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟ ಮುಂದೂಡಿರುವುದರಿಂದ ಹಲವಾರು ಯುವ ಕ್ರೀಡಾಪಟುಗಳು ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು 2021ರ ಒಲಿಂಪಿಕ್ಸ್ಗೆ ಅವಕಾಶಗಿಟ್ಟಿಸಿಕೊಳ್ಳಲು ಪ್ರಯತ್ನಿಸಬೇಕು. ಸೀನಿಯರ್ ಅಥ್ಲೀಟ್ಗಳು ಫಿಟ್ನೆಸ್ ಕಡೆ ಗಮನ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಾವು ವಿದೇಶಿ ತರಬೇತಿ ಕ್ಯಾಂಪ್ಗಳನ್ನು ಏರ್ಪಡಿಸುವುದರ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಆದರೆ 2021ಕ್ಕೆ ಅಂತರರಾಷ್ಟ್ರೀಯ ಕ್ಯಾಂಪ್ ಹಾಗೂ ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸುತ್ತೇವೆ ಎಂದು ಖಚಿತಪಡಿಸಿದರು.
ಎಎಫ್ಐ ಸಮಿತಿ ಸೋಮವಾರ ನಡೆಸಿದ ಆನ್ಲೈನ್ ಸಭೆಯಲ್ಲಿ ರಾಷ್ಟ್ರೀಯ ತರಬೇತುದಾರರು, ಕೋಚ್ಗಳು, ಅಥ್ಲೀಟ್ಗಳು ಹಾಗೂ ಸಹಾಯಕ ಸಿಬ್ಬಂದಿ ಪಾಲ್ಗೊಂಡಿದ್ದರು.