ಕರ್ನಾಟಕ

karnataka

ಹಾಕಿ: ಒಲಿಂಪಿಕ್ಸ್​ನಲ್ಲಿ ಭಾರತ ಮುನ್ನಡೆಸಲಿದ್ದಾರೆ ಮನ್‌ಪ್ರೀತ್ ಸಿಂಗ್

By

Published : Jun 22, 2021, 8:02 PM IST

ಮನ್​ಪ್ರೀತ್ ಜೊತೆ​ ತಂಡದ ನಾಯಕತ್ವದ ಗುಂಪಿನ ಭಾಗವಾಗಿರುವ ಅನುಭವಿ ಡಿಫೆಂಡರ್​ ಬೀರೇಂದ್ರ ಲಕ್ರಾ ಮತ್ತು ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಮನ್‌ಪ್ರೀತ್ ಸಿಂಗ್
ಮನ್‌ಪ್ರೀತ್ ಸಿಂಗ್

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡವನ್ನು ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ ಎಂದು ಹಾಕಿ ಇಂಡಿಯಾ ಮಂಗಳವಾರ ಖಚಿತಪಡಿಸಿದೆ. ಈಗಾಗಲೇ 16 ಸದಸ್ಯರ ಹಾಕಿ ತಂಡವನ್ನು ಘೋಷಿಸಿಲಾಗಿದೆ

ಇನ್ನು ಮನ್​ಪ್ರೀತ್ ಜೊತೆ​ ತಂಡದ ನಾಯಕತ್ವದ ಗುಂಪಿನ ಭಾಗವಾಗಿರುವ ಅನುಭವಿ ಡಿಫೆಂಡರ್​ ಬೀರೇಂದ್ರ ಲಕ್ರಾ ಮತ್ತು ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಭಾರತ ಹಾಕಿ ತಂಡದ ಪರ ಮೂರನೇ ಬಾರಿಗೆ ಒಲಿಂಪಿಕ್ಸ್‌ ಭಾಗವಹಿಸುವ ಅವಕಾಶ ಸಿಕ್ಕಿರುವುದು ಮತ್ತು ತಂಡ ತಂಡದ ನಾಯಕನಾಗಿ ಆಯ್ಕೆ ಆಗಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ಮಹಿಳಾ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ:

ಜುಲೈ 23ರಿಂದ ಆಗಸ್ಟ್ 8ರವರೆಗೆ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯಲಿದೆ. ಇದಕ್ಕಾಗಿ ಕಳೆದ ಭಾನುವಾರ ಹಾಕಿ ಇಂಡಿಯಾ 16 ಸದಸ್ಯರ ಮಹಿಳಾ ತಂಡವನ್ನು ಘೋಷಿಸಿತ್ತು. ಆದರೆ, ನಾಯಕಿಯ ಹೆಸರನ್ನು ನಂತರ ಘೋಷಿಸುವುದಾಗಿ ತಿಳಿಸಿದ್ದರು. ಸೋಮವಾರ ರಾಣಿ ರಾಂಪಾಲ್ ಅವರನ್ನು ನಾಯಕಿಯನ್ನಾಗಿ, ದೀಪ್ ಗ್ರೇಸ್ ಎಕ್ಕಾ ಮತ್ತು ಗೋಲ್​ ಕೀಪರ್ ಸವಿತಾ ಪೂನಿಯಾ ಅವರನ್ನು ಉಪ ನಾಯಕಿಯರನ್ನಾಗಿ ಆಯ್ಕೆ ಮಾಡಿತ್ತು.

ಇದನ್ನು ಓದಿ: ಹಾಕಿ : ಟೋಕಿಯೋದಲ್ಲಿ ಪದಕ ಗೆಲ್ಲಬಲ್ಲ 5 ತಂಡಗಳಲ್ಲಿ ಭಾರತವೂ ಒಂದು : ಮಾಜಿ ಕೋಚ್ ಓಲ್ಟ್​ಮನ್ಸ್​

ABOUT THE AUTHOR

...view details