ಕರ್ನಾಟಕ

karnataka

ETV Bharat / sports

ಸುನಿಲ್ ಚೆಟ್ರಿ ಮುಡಿಗೆ ಮತ್ತೊಂದು ಗರಿ: ಮೆಸ್ಸಿ ದಾಖಲೆ ಮುರಿದ ಭಾರತೀಯ ಫುಟ್ಬಾಲಿಗ - ಕ್ರಿಸ್ಟಿಯಾನೊ ರೊನಾಲ್ಡೊ

ಪಂದ್ಯದಲ್ಲಿ ಎರಡು ಗೋಲುಗಳಿಸುವ ಮೂಲಕ ಈಗ ಆಡುತ್ತಿರುವ ಆಟಗಾರರ ಪೈಕಿ ಹೆಚ್ಚು ಗೋಲು ಗಳಿಸಿರುವವರ ಪಟ್ಟಿಯಲ್ಲಿ ಸುನಿಲ್ ಚೆಟ್ರಿ ಎರಡನೇ ಸ್ಥಾನಕ್ಕೇರಿದರು. ಅವರ ಖಾತೆಯಲ್ಲಿ ಈಗ 74 ಗೋಲುಗಳಿವೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ 103 ಗೋಲು ಗಳಿಸಿದ್ದು ಮೊದಲ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲಿ ಮಬ್‌ಖೌತ್‌ ಇದ್ದು 73 ಗೋಲು ಗಳಿಸಿದ್ದಾರೆ.

Sunil Chhetri
ಸುನಿಲ್ ಚೆಟ್ರಿ

By

Published : Jun 8, 2021, 9:12 AM IST

Updated : Jun 8, 2021, 11:19 AM IST

ದೋಹಾ: ಆರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಭಾರತ ತಂಡ ವಿಶ್ವಕಪ್‌ ಮತ್ತು ಏಷ್ಯಾಕಪ್ ಫುಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ ಸೋಮವಾರ ಮೊದಲ ಜಯದ ಸಾಧಿಸಿತು. ಬಾಂಗ್ಲಾದೇಶದ ಎದುರು ನಡೆದ ಪಂದ್ಯದಲ್ಲಿ ನಾಯಕ ಸುನಿಲ್ ಚೆಟ್ರಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ 2-0 ಅಂತರದಲ್ಲಿ ವಿಜಯ ಸಾಧಿಸಲು ಸಾಧ್ಯವಾಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 105ನೇ ಸ್ಥಾನದಲ್ಲಿರುವ ಭಾರತ 184ನೇ ಸ್ಥಾನದಲ್ಲಿರುವ ಬಾಂಗ್ಲಾವನ್ನು ಆರಂಭದಿಂದಲೇ ಕಾಡಿತು. ಮೊದಲಾರ್ಧದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಚೆಂಡನ್ನು ಗೋಲ್‌ಪೋಸ್ಟ್‌ ಮುಟ್ಟಿಸಲು ಆಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಯಶಸ್ಸು ಕಂಡಿತು. 79ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಮುನ್ನಡೆ ಗಳಿಸಿಕೊಟ್ಟರು.

ಪಂದ್ಯದಲ್ಲಿ ಎರಡು ಗೋಲುಗಳಿಸುವ ಮೂಲಕ ಈಗ ಆಡುತ್ತಿರುವ ಆಟಗಾರರ ಪೈಕಿ ಹೆಚ್ಚು ಗೋಲು ಗಳಿಸಿರುವವರ ಪಟ್ಟಿಯಲ್ಲಿ ಸುನಿಲ್ ಚೆಟ್ರಿ ಎರಡನೇ ಸ್ಥಾನಕ್ಕೇರಿದರು. ಅವರ ಖಾತೆಯಲ್ಲಿ ಈಗ 74 ಗೋಲುಗಳಿವೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ 103 ಗೋಲು ಗಳಿಸಿದ್ದು ಮೊದಲ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲಿ ಮಬ್‌ಖೌತ್‌ ಇದ್ದು 73 ಗೋಲು ಗಳಿಸಿದ್ದಾರೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಪ್ರಫುಲ್ ಪಟೇಲ್ ಟ್ವೀಟ್ ಮಾಡಿ​ ಎರಡನೇ ಅತಿ ಹೆಚ್ಚು ಸಕ್ರಿಯ ಅಂತಾರಾಷ್ಟ್ರೀಯ ಗೋಲು ಗಳಿಸಿದ ಆಟಗಾರ ಸುನಿಲ್​ ಚೆಟ್ರಿಗೆ ಅಭಿನಂದನೆಗಳು ಎಂದು ಟ್ವೀಟ್​ ಮಾಡಿದ್ದಾರೆ.

ಸೋಮವಾರದ ಗೆಲುವಿನೊಂದಿಗೆ ವಿಶ್ವಕಪ್ ಅರ್ಹತಾ ಟೂರ್ನಿಯೊಂದರಲ್ಲಿ ಭಾರತ ಆರು ವರ್ಷಗಳ ನಂತರ ಮೊದಲ ಜಯ ಗಳಿಸಿದಂತಾಗಿದೆ. ವಿದೇಶದಲ್ಲಿ ಇದು 20 ವರ್ಷಗಳ ನಂತರ ಮೊದಲ ಜಯವಾಗಿದೆ. 2015ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಗುವಾಮ್ ಎದುರು ಭಾರತ 1-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಬಾಂಗ್ಲಾ ವಿರುದ್ಧ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಇದು ಭಾರತದ ಮೂರನೇ ಜಯವಾಗಿದೆ. 1985ರಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಭಾರತ 2–1ರಲ್ಲಿ ಗೆದ್ದಿತ್ತು.

Last Updated : Jun 8, 2021, 11:19 AM IST

ABOUT THE AUTHOR

...view details