ಕರ್ನಾಟಕ

karnataka

ETV Bharat / sports

ಪೋರ್ಚುಗಲ್​ಗೆ ವಿಶ್ವಕಪ್​ ಗೆದ್ದುಕೊಡಬೇಕೆಂಬುದು ನನ್ನ ಬಹುದೊಡ್ಡ ಕನಸು: ರೊನಾಲ್ಡೊ - ಯುಎಎಫ್​ಎ ನೆಷನ್ಸ್​ ಲೀಗ್​

ರೊನಾಲ್ಡೊ ನೇತೃತ್ವದ ಪೋರ್ಚುಗೀಸ್​ ತಂಡ ಫ್ರಾನ್ಸ್‌ನಲ್ಲಿ ನಡೆದ 2016ರ ಯುರೋ ಕಪ್​ ಮೂಲಕ ತಮ್ಮ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದಿತ್ತು. ಇದರ ಬೆನ್ನಲ್ಲೇ 2019 ರಲ್ಲಿ ಯುಇಎಫ್‌ಎ ನೇಷನ್ಸ್ ಲೀಗ್‌ನ ಉದ್ಘಾಟನಾ ಆವೃತ್ತಿ ಗೆಲ್ಲುವ ಮೂಲಕ ಭಾರಿ ಯಶಸ್ಸು ಸಾಧಿಸಿತ್ತು. ಹಾಗಾಗಿ ಮುಂದಿನ ವಿಶ್ವಕಪ್​ನಲ್ಲೂ ಪೋರ್ಚುಗಲ್​ ಪ್ರಾಬಲ್ಯ ಸಾಧಿಸಲಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಕ್ರಿಶ್ಚಿಯಾನೋ ರೊನಾಲ್ಡೊ
ಕ್ರಿಶ್ಚಿಯಾನೋ ರೊನಾಲ್ಡೊ

By

Published : Dec 30, 2020, 10:17 PM IST

ಮಾಂಟೆ ಕಾರ್ಲೋ: ಪೋರ್ಚುಗಲ್‌ನ ಸ್ಟಾರ್ ಸ್ಟ್ರೈಕರ್​ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ತಮ್ಮ ದೊಡ್ಡ ಕನಸು ಎಂದು ಹೇಳಿದ್ದಾರೆ. ಕತಾರ್‌ನಲ್ಲಿ ನಡೆಯಲಿರುವ 2022 ರ ಫಿಫಾ ವಿಶ್ವಕಪ್ಅನ್ನು ಪೋರ್ಚುಗಲ್​ ತಂಡ ಗೆಲ್ಲುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ರೊನಾಲ್ಡೊ ನೇತೃತ್ವದ ಪೋರ್ಚುಗೀಸ್​ ತಂಡ ಫ್ರಾನ್ಸ್‌ನಲ್ಲಿ ನಡೆದ 2016ರ ಯುರೋ ಕಪ್​ ಮೂಲಕ ತಮ್ಮ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದಿತ್ತು. ಇದರ ಬೆನ್ನಲ್ಲೇ 2019 ರಲ್ಲಿ ಯುಇಎಫ್‌ಎ ನೇಷನ್ಸ್ ಲೀಗ್‌ನ ಉದ್ಘಾಟನಾ ಆವೃತ್ತಿಯನ್ನು ಗೆಲ್ಲುವ ಮೂಲಕ ಭಾರಿ ಯಶಸ್ಸು ಸಾಧಿಸಿತ್ತು. ಹಾಗಾಗಿ ಮುಂದಿನ ವಿಶ್ವಕಪ್​ನಲ್ಲೂ ಪೋರ್ಚುಗಲ್​ ಪ್ರಾಬಲ್ಯ ಸಾಧಿಸಲಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಕ್ರಿಶ್ಚಿಯಾನೋ ರೊನಾಲ್ಡೊ

2022 ರಲ್ಲಿ ಪೋರ್ಚುಗಲ್ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಸಾಧ್ಯತೆಗಳ ಬಗ್ಗೆ ಮಾತನಾಡಿರುವ ಅವರು, " ನಾವು ಈಗಾಗಲೆ ಬಹಳ ವಿಶೇಷವಾದ ಯುರೋ ಕಪ್ ಗೆದ್ದಿದ್ದೇವೆ . ನಾವು 2016ರಲ್ಲಿ ಈ ಟೂರ್ನಿ ಗೆದ್ದಿರುವುದರಿಂದ ಮುಂಬರುವ 2022ರ ಫಿಫಾ ವಿಶ್ವಕಪ್​ ಕೂಡ ಗೆಲ್ಲಲು ಬಯಸುತ್ತೇವೆ. ಇದು ನಮ್ಮಿಂದ ಖಂಡಿತ ಸಾಧ್ಯ, ಎಲ್ಲವೂ ಸಾಧ್ಯ. ಆದರೆ, ನೀವು ವಾಸ್ತವಿಕವಾಗಿರಬೇಕು".

ನಾನು ನಿಮಗೆ ಅನೇಕ ಬಾರಿ ಹೇಳಿದಂತೆ, ಪೋರ್ಚುಗಲ್​ಗಾಗಿ ಏನನ್ನಾದರೂ(ವಿಶ್ವಕಪ್​) ಗೆಲ್ಲುವುದು ನನ್ನ ಕನಸು . ಈಗಾಗಲೇ ನಾನು ಎರಡೂ ಕಪ್​ಗಳನ್ನ ಗೆದ್ದಿರುವುದು (ಯುರೋ 2016 ಮತ್ತು 2018-19 ನೇಷನ್ಸ್ ಲೀಗ್) ಸಂತೋಷ ತಂದಿದೆ. ಅಲ್ಲದೇ ನಾನು ಆಡಿರುವ ಪ್ರತಿಯೊಂದು ಕ್ಲಬ್ ಪರವೂ ಟ್ರೋಫಿಗಳನ್ನು ಗೆದ್ದಿದ್ದೇನೆ. ಆದರೆ ವಿಶ್ವಕಪ್ ಗೆಲ್ಲುವುದು ನನ್ನ ಬಹುದೊಡ್ಡ ಕನಸು, ಅದೊಂದು ಕನಸು" ಎಂದಿದ್ದಾರೆ.

ವಿಶ್ವ ಫುಟ್​ಬಾಲ್​ ಜಗತ್ತಿನಲ್ಲಿ ಪ್ರಸಿದ್ಧ ಆಟಗಾರನಾಗಿರುವ ರೊನಾಲ್ಡೊಗೆ 36 ವರ್ಷವಾಗಿದೆ. 2022ರಲ್ಲಿ ಕತಾರ್​ನಲ್ಲಿ ನಡೆಯುವ ವಿಶ್ವಕಪ್​ ಅವರ ಪಾಲಿಗೆ ಕೊನೆಯದಾಗಲಿದೆ.

ABOUT THE AUTHOR

...view details