ಕರ್ನಾಟಕ

karnataka

ETV Bharat / sports

ಲಾಕ್​​​​ಡೌನ್​ ನಡುವೆಯೂ ಸ್ವತಃ ರಕ್ತದಾನ ಮಾಡಿ ಮಾನವೀಯತೆ ಮೆರೆದ ಫುಟ್ಬಾಲ್​​​​​ ತಾರೆ - ಜೆಜೆ ಲಾಲ್ಬೆಕುಲುವಾ ರಕ್ತದಾನ. ಕೊವಿಡ್​ 19

ಭಾರತ ತಂಡದ ಮೂಲದ 29 ವರ್ಷದ ಲಾಲ್ಬೆಕುಲುವಾ ಇಂಡಿಯುನ್​ ಸೂಪರ್​ ಲೀಗ್​ನ ಚೆನ್ನೈಯನ್‌ ತಂಡದ ಪರ ಆಡುತ್ತಿದ್ದಾರೆ. ದೇಶೆದೆಲ್ಲೆಡೆ ಲಾಕ್​ಡೌನ್​ ಇರುವುದರಿಂದ ಡಯಾಲಿಸಿಸ್​ ರೋಗಿಗಳಿಗೆ ರಕ್ತದ ಕೊರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಲಾಲ್ಬೆಕುಲುವಾ ಲಾಕ್‌ಡೌನ್‌ ನಡುವೆಯೂ ರಕ್ತದಾನ ಮಾಡುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

India footballer Jeje Lalpekhlua
ರಕ್ತದಾನ ಮಾಡಿದ ಲಾಲ್ಬೆಕುಲುವಾ

By

Published : Apr 13, 2020, 1:07 PM IST

ನವದೆಹಲಿ: ದೇಶದೆಲ್ಲೆಡೆ ಕೊರೊನಾ ವೈರಸ್‌ನಿಂದ ಲಾಕ್‌ಡೌನ್‌ ಆಗಿರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳು ರಕ್ತ ಸಿಗದೇ ಪರದಾಟ ನಡೆಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಖ್ಯಾತ ಫ‌ುಟ್ಬಾಲ್​ ಆಟಗಾರ ಜೆಜೆ ಲಾಲ್ಬೆಕುಲುವಾ ಮಾನವೀಯತೆ ಮೆರದಿದ್ದಾರೆ.

ಭಾರತ ತಂಡದ ಮೂಲದ 29 ವರ್ಷದ ಲಾಲ್ಬೆಕುಲುವಾ ಇಂಡಿಯುನ್​ ಸೂಪರ್​ ಲೀಗ್​ನ ಚೆನ್ನೈಯನ್‌ ತಂಡದ ಪರ ಆಡುತ್ತಿದ್ದಾರೆ. ದೇಶೆದೆಲ್ಲೆಡೆ ಲಾಕ್​ಡೌನ್​ ಇರುವುದರಿಂದ ಡಯಾಲಿಸಿಸ್​ ರೋಗಿಗಳಿಗೆ ರಕ್ತದ ಕೊರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಲಾಲ್ಬೆಕುಲುವಾ ಲಾಕ್‌ಡೌನ್‌ ನಡುವೆಯೂ ರಕ್ತದಾನ ಮಾಡುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ರಕ್ತದಾನ ಮಾಡಿದ ಲಾಲ್ಬೆಕುಲುವಾ

ಕೇಂದ್ರ ಸರ್ಕಾರ ಲಾಕ್​ಡೌನ್​ ಅನ್ನು 2 ವಾರ ವಿಸ್ತರಿಸಿದ ನಂತರ ಮಿಜೋರಾಂನ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ಶೇಖರಣೆ ಕಡಿಮೆ ಆಗಿದೆ. ಇದರಿಂದ ನೂರಾರು ರೋಗಿಗಳು ತೊಂದರೆಗೆ ಸಿಲುಕಿದ್ದಾರೆ, ಈ ವಿಷಯ ತಿಳಿಯುತ್ತಿದ್ದಂತೆ ಕುಲುವಾ ಸ್ವತಃ ಕಾರ್ಯಪ್ರವೃತ್ತರಾಗಿ ರಕ್ತದಾನ ಮಾಡಿದ್ದಾರೆ.

ಲಾಕ್‌ಡೌನ್‌ ಇರುವುದರಿಂದ ಎಲ್ಲ ರಕ್ತ ನಿಧಿ ಘಟಕಗಳಲ್ಲಿ ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕೆಲವು ಆಸ್ಪತ್ರೆಗಳು ಎನ್​ಜಿಒ “ಯಂಗ್‌ ಮಿಝೊ ಸಂಸ್ಥೆ’ಯ ಸಹಾಯ ಕೇಳಿಕೊಂಡಿದ್ದರು. ಈ ವಿಷಯ ನನಗೆ ತಿಳಿದ ತಕ್ಷಣ ಮಿಜೋರಾಂನ ಡಾರ್ಟ್‌ ಲ್ಯಾಂಗ್‌ನಲ್ಲಿರುವ ಸೈನೊದ್‌ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ್ದೇನೆ. ನನ್ನೊಂದಿಗೆ ಬಂದ 33 ಮಂದಿಯಲ್ಲಿ ವೈದ್ಯರ ಪರೀಕ್ಷೆ ನಂತರ 27 ಮಂದಿ ರಕ್ತದಾನ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಕೊವಿಡ್​ 19 ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡುವ ಅಗತ್ಯವಿದೆ. ಇಂತಹ ಒಂದು ಪುಣ್ಯ ಕಾರ್ಯದಲ್ಲಿ ನೆರವಾಗಲು ನನಗೆ ಶಕ್ತಿ ನೀಡಿದ ಸರ್ವಶಕ್ತನಿಗೆ ನಾನು ಕೃತಜ್ಞನಾಗಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯಲ್ಲೇ ಇರಿ, ಹೊರಗಡೆ ಬರಬೇಡಿ’ ಎಂದು ಲಾಲ್ಬೆಕುಲುವಾ ತಿಳಿಸಿದ್ದಾರೆ.

ABOUT THE AUTHOR

...view details