ನವದೆಹಲಿ :ಕೊರೊನಾ ಭೀತಿಯಿಂದ ಮುಂದೂಡಲ್ಪಟ್ಟಿದ್ದ ಭಾರತದಲ್ಲಿ ಮೊದಲೇ ಆಯೋಜನೆಗೊಂಡಿದ್ದ ಫಿಫಾ ಅಂಡರ್-17 ವನಿತಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಗೆ ಹೊಸ ವೇಳಾಪಟ್ಟಿ ನಿಗದಿಗೊಳಿಸಲಾಗಿದೆ.
ನವೆಂಬರ್ 2ರಿಂದ 21ರವರೆಗೆ ನಡೆಯಬೇಕಿದ್ದ ಈ ಟೂರ್ನಿ ಕೊರೊನಾ ಸಾಂಕ್ರಾಮಿಕ ಭೀತಿಯಿಂದ ಮುಂದೂಡಲ್ಪಟ್ಟಿತ್ತು. ಇದೀಗ ಫಿಫಾ 2021ರ ಫೆಬ್ರವರಿ 17ರಿಂದ ಮಾರ್ಚ್ 7ರ ತನಕ ನಡೆಯಲಿದೆ ಎಂದು ಫಿಫಾ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಯುಇಎಫ್ಎ, ಕಾನ್ಕಕಾಫ್, ಸಿಎಫ್ಒಎಫ್ಸಿ ಮತ್ತ ಕಾನ್ಮೆಬೊಲ್ನ ಅರ್ಹತಾ ಪಂದ್ಯಾವಳಿಗಳನ್ನು ಪ್ರಶಸ್ತ ವಾತಾವರಣವನ್ನು ಗಮನಿಸಿ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ ಎಂದು ಎಲ್ಒಸಿ ತಿಳಿಸಿದೆ. ಭಾರತದಲ್ಲಿ ಮಹಿಳೆಯರ ಫುಟ್‌ಬಾಲ್ ಬೆಳವಣಿಗೆಗೆ ಉತ್ತೇಜನಕಾರಿಯಾಗುವ ರೀತಿ ಒಂದು ವೇದಿಕೆ ಅಭಿವೃದ್ದಿಗೊಳಿವುದು ನಮ್ಮ ಗುರಿಯಾಗಿದೆ. ಈಗಾಗಲೇ ಎಲ್ಲಾ ಆತಿಥೇಯ ನಗರಗಳು ಬಹಳ ಅಚ್ಚುಕಟ್ಟು ಹಾಗೂ ಬದ್ಧತೆಯೊಂದಿಗೆ ಈ ಮಹಾಕೂಟಕ್ಕೆ ಸಿದ್ಧವಾಗಿವೆ.
ಹೊಸ ದಿನಾಂಕಗಳು ಕಳೆದು ಹೋಗಿರುವ ಸಮಯವನ್ನು ಸರಿದೂಗಿಸಲು ಮತ್ತು ಮುಂದೆ ವೇಗವಾಗಿ ಸಾಗಲು ಅವಕಾಶ ಮಾಡಿಕೊಡುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದೆ. ಈ ಫಿಫಾ ವಿಶ್ವಕಪ್ ಭಾರತದ ಪ್ರಮುಖ ನಗರಗಳಾದ ನವಿಮುಂಬೈ, ಗುವಾಹಟಿ, ಅಹ್ಮದಾಬಾದ್, ಗುವಾಹಟಿ, ಕೋಲ್ಕತಾ ಮತ್ತು ಭುವನೇಶ್ವರದಲ್ಲಿ ನಡೆಯಲಿದೆ.