ಕರ್ನಾಟಕ

karnataka

ETV Bharat / sports

ಫಿಫಾ ರ‍್ಯಾಂಕಿಂಗ್: 105ನೇ ಸ್ಥಾನವನ್ನು ಉಳಿಸಿಕೊಂಡ ಭಾರತ

ವಿಶ್ವ ಚಾಂಪಿಯನ್ ಫ್ರಾನ್ಸ್​ 2ರಲ್ಲಿ ಮತ್ತು ಬ್ರೆಜಿಲ್ 3 ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮತ್ತು ಪೋರ್ಚುಗಲ್ ಕ್ರಮವಾಗಿ 4 ಮತ್ತು 5ರಲ್ಲಿವೆ. ಬೆಹ್ರೈನ್ ತಂಡ ಮಾತ್ರ ಒಂದು ಸ್ಥಾನ ಮೇಲೇರಿದೆ. 99ರಿಂದ 98 ನೇಸ್ಥಾನ ಪಡೆದಿದೆ.

ಫಿಫಾ ರ‍್ಯಾಂಕಿಂಗ್: 105ನೇ ಸ್ಥಾನವನ್ನು ಉಳಿಸಿಕೊಂಡ ಭಾರತ
ಫಿಫಾ ರ‍್ಯಾಂಕಿಂಗ್: 105ನೇ ಸ್ಥಾನವನ್ನು ಉಳಿಸಿಕೊಂಡ ಭಾರತ

By

Published : May 27, 2021, 5:40 PM IST

Updated : May 27, 2021, 6:25 PM IST

ನವದೆಹಲಿ: ಭಾರತ ಫುಟ್ಬಾಲ್​ ತಂಡದ ಫಿಫಾ ಗುರುವಾರ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್​ನಲ್ಲಿ 105ನೇ ಸ್ಥಾನವನ್ನು ಉಳಿಸಿಕೊಂಡಿದೆ. ಭಾರತ ಮಹಿಳಾ ತಂಡ 4 ಸ್ಥಾನ ಕುಸಿತ ಕಂಡು 57 ನೇ ಸ್ಥಾನಕ್ಕೆ ಕುಸಿದಿದೆ.

ಕೋವಿಡ್​ 19 ನಿಂದ ಅಂತಾರಾಷ್ಟ್ರೀಯ ಫುಟ್ಬಾಲ್​ ತಟಸ್ಥವಾಗಿದೆ. ಕಳೆದ ಆವೃತ್ತಿಯಲ್ಲಿ ಇಂಗ್ಲೆಂಡ್ ಮತ್ತು ಉಕ್ರೇನ್ ನಡುವೆ ನಡೆದ ಔಪಚಾರಿಕ ಪಂದ್ಯಗಳು ಮಾತ್ರ ಅಂತಾರಾಷ್ಟ್ರೀಯ ಪಂದ್ಯಗಳಾಗಿವೆ. ಹಾಗಾಗಿ ಟಾಪ್ 50 ಶ್ರೇಯಾಂಕಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬೆಲ್ಜಿಯಂ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್ ಮತ್ತು ಬ್ರೆಜಿಲ್ ನಂತರದ ಸ್ಥಾನದಲ್ಲಿವೆ ಎಂದು ಫಿಫಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವ ಚಾಂಪಿಯನ್ ಫ್ರಾನ್ಸ್​ 2ರಲ್ಲಿ ಮತ್ತು ಬ್ರೆಜಿಲ್ 3 ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮತ್ತು ಪೋರ್ಚುಗಲ್ ಕ್ರಮವಾಗಿ 4 ಮತ್ತು 5ರಲ್ಲಿವೆ. ಬೆಹ್ರೈನ್ ತಂಡ ಮಾತ್ರ ಒಂದು ಸ್ಥಾನ ಮೇಲೇರಿದೆ. 99ರಿಂದ 98ನೇಸ್ಥಾನ ಪಡೆದಿದೆ.

ಆದರೆ,ಮುಂದಿನ ವಾರ ಅಂತಾರಾಷ್ಟ್ರೀಯ ಪಂದ್ಯಗಳು 2021ರ ಫಿಫಾ ವಿಶ್ವಕಪ್​ನ ಅರ್ಹತಾ ಟೂರ್ನಿಯ ಮೂಲಕ ಆರಂಭವಾಗಲಿರುವುದರಿಂದ ರ‍್ಯಾಂಕಿಂಗ್​ನಲ್ಲಿ ಬದಲಾವಣೆಯಾಗಲಿವೆ.

ಮಹಿಳೆಯರ ರ‍್ಯಾಂಕಿಂಗ್​ನಲ್ಲಿ ಯುಎಸ್​ಎ ಅಗ್ರಸ್ಥಾನದಲ್ಲಿದ್ದರೆ, ಜರ್ಮನಿ, ನೆದರ್ಲೆಂಡ್ಸ್​ , ಫ್ರಾನ್ಸ್ ಮತ್ತು ಸ್ವೀಡನ್ ಟಾಪ್ 5ರಲ್ಲಿವೆ.

Last Updated : May 27, 2021, 6:25 PM IST

ABOUT THE AUTHOR

...view details