ದುಬೈ :ಜೂನ್ 18ರಿಂದ ಸೌತಾಂಪ್ಟನ್ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಫೈನಲ್ ಪಂದ್ಯದಲ್ಲಿ ಗೆದ್ದವರಿಗೆ ಐಸಿಸಿ ಬರೋಬ್ಬರಿ 11.71 ಕೋಟಿ ರೂ((1.6 ಮಿಲಿಯನ್ ಡಾಲರ್) ಮೊತ್ತವನ್ನು ಸೋಮವಾರ ಘೋಷಿಸಿದೆ.
ಇನ್ನು, ಫೈನಲ್ನಲ್ಲಿ ಸೋತ ತಂಡವೂ ಕೂಡ 5 ಕೋಟಿ 85 ಲಕ್ಷ ರೂಪಾಯಿಯನ್ನು(8,00,000 ಡಾಲರ್) ಜೇಬಿಗಿಳಿಸಿಕೊಳ್ಳಲಿದೆ. ಅಲ್ಲದೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಕೂಡ ಐಸಿಸಿ ಬಹುಮಾನದ ಮೊತ್ತ ಪ್ರಕಟಿಸಿದೆ.
ಐಸಿಸಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಚಾಂಪಿಯನ್ ತಂಡಕ್ಕೆ 11.71 ಕೋಟಿ ರೂ(1.6 ಮಿಲಿಯನ್ ಡಾಲರ್), ರನ್ನರ್ ಅಪ್ ತಂಡಕ್ಕೆ 5.85 ಕೋಟಿ ರೂ. (8,00,000 ಡಾಲರ್) 3ನೇ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ತಂಡಕ್ಕೆ 3.3 ಕೋಟಿ ರೂ.(4,50,000 ಡಾಲರ್), 4ನೇ ಸ್ಥಾನ ಪಡೆದಿರುವ ಇಂಗ್ಲೆಂಡ್ಗೆ 2.5 ಕೋಟಿ ರೂ.(3,50,000 ಡಾಲರ್), 5ನೇ ಸ್ಥಾನ ಪಡೆದಿರುವ ಪಾಕಿಸ್ತಾನಕ್ಕೆ 1.5 ಕೋಟಿ ರೂ.(2,00,000 ಡಾಲರ್) ಹಾಗೂ ಉಳಿದ ತಂಡಗಳಿಂದ ತಲಾ 73 ಲಕ್ಷ ರೂ.(1,00,000 ಡಾಲರ್) ಬಹುಮಾನ ಪಡೆಯಲಿವೆ.
ಇದನ್ನು ಓದಿ: ಇಂಗ್ಲೆಂಡ್ನಲ್ಲಿ ಪಿಚ್ಗೆ ಹೊಂದಿಕೊಂಡರೆ ರನ್ ಗಳಿಕೆ ಕಷ್ಟವೇನಲ್ಲ: ರಹಾನೆ