ಕರ್ನಾಟಕ

karnataka

By

Published : May 19, 2021, 9:01 PM IST

ETV Bharat / sports

ಒಂದು ವೇಳೆ WTC​ ಫೈನಲ್ ಪಂದ್ಯ ಡ್ರಾ - ಟೈ ಅಥವಾ ರದ್ದಾದ್ರೆ ಏನಾಗಲಿದೆ?

ಜೂನ್ 18ರಿಂದ 22ರವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ನಡೆಯಲಿದೆ. ಆದರೆ, ಐಸಿಸಿ ಫೈನಲ್​ ಬಗ್ಗೆ ಇನ್ನು ಯಾವುದೇ ಷರತ್ತುಗಳನ್ನು ಬಿಡುಗಡೆ ಮಾಡಿಲ್ಲ. ಪಂದ್ಯ ಫಲಿತಾಂಶ ಕಾಣದಿದ್ದರೆ ಏನಾಗಲಿದೆ ಎನ್ನುವುದರ ಬಗ್ಗೆ ಬಿಸಿಸಿಐ ಕೂತೂಹಲದಿಂದ ಕಾಯುತ್ತಿದೆ.

ವಿಶ್ವ ಟೆಸ್ಟ್​ ಚಾಂಪಿಯರ್ನ್​ಶಿಪ್ ಫೈನಲ್
ವಿಶ್ವ ಟೆಸ್ಟ್​ ಚಾಂಪಿಯರ್ನ್​ಶಿಪ್ ಫೈನಲ್

ಮುಂಬೈ: ಒಂದು ವೇಳೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ಡ್ರಾ, ಟೈ ಅಥವಾ ರದ್ದಾದರೆ ಫಲಿತಾಂಶ ಏನಾಗಲಿದೆ ಎಂದು ತಿಳಿದುಕೊಳ್ಳುವುದಕ್ಕೆ ಬಿಸಿಸಿಐ ಕಾತರ ವ್ಯಕ್ತಪಡಿಸುತ್ತಿದೆ. ಮುಂದಿನ ತಿಂಗಳು ನಡೆಯುವ ಈ ಪಂದ್ಯಕ್ಕೆ ತಂಡವನ್ನು ಶಾರ್ಟ್​ಲಿಸ್ಟ್​ ಮಾಡಿಕೊಳ್ಳಲು ಬಿಸಿಸಿಐ, ಐಸಿಸಿ ಆಟದ ಷರತ್ತುಗಳಿಗಾಗಿ ಎದುರು ನೋಡುತ್ತಿದೆ.

ಜೂನ್ 18ರಿಂದ 22ರವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ ನಡೆಯಲಿದೆ. ಆದರೆ, ಐಸಿಸಿ ಫೈನಲ್​ ಬಗ್ಗೆ ಇನ್ನು ಯಾವುದೇ ಷರತ್ತುಗಳನ್ನು ಬಿಡುಗಡೆ ಮಾಡಿಲ್ಲ. ಪಂದ್ಯ ಫಲಿತಾಂಶ ಕಾಣದಿದ್ದರೆ ಏನಾಗಲಿದೆ ಎನ್ನುವುದರ ಬಗ್ಗೆ ಬಿಸಿಸಿಐ ಕೂತೂಹಲದಿಂದ ಕಾಯುತ್ತಿದೆ.

ಇದು ಮತ್ತೊಂದು ದ್ವಿಪಕ್ಷೀಯ ಸರಣಿ ಟೆಸ್ಟ್ ಪಂದ್ಯದಂತಲ್ಲ, ಆದ್ದರಿಂದ, ನಾವು ಆಟದ ಪರಿಸ್ಥಿತಿಗಳ ಬಗ್ಗೆ ತಿಳಿದು ಕೊಳ್ಳಬೇಕಾಗಿರುತ್ತದೆ. ಹಾಗಾಗಿ ಚಾಂಪಿಯನ್​ಶಿಪ್​ ಫೈನಲ್ ಕುರಿತು ಮೂರು ಮೂಲಭೂತ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ " ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

" ಕನಿಷ್ಠ ಒಂದು ಇನ್ನಿಂಗ್ಸ್‌ಗಳಿಲ್ಲದೇ ಡ್ರಾ, ಟೈ ಅಥವಾ ಅಂತಿಮವಾಗಿ ಎರಡೂ ತಂಡಗಳೂ ಕನಿಷ್ಠ ಒಂದು ಇನ್ನಿಂಗ್ಸ್ ಆಡಲಾಗದೇ ಪಂದ್ಯ ವಾಷ್​ಔಟ್​ ಆದ ಸಂದರ್ಭದಲ್ಲಿ ಫಲಿತಾಶ ಏನಾಗುತ್ತದೆ? " ಎಂಬುದರ ಬಗ್ಗೆ ತಮಗೆ ಕೂತೂಹಲವಿದೆ. ಹಾಗಾಗಿ ಐಸಿಸಿ ಮುಂದಿನ ದಿನಗಳಲ್ಲಿ ಪಂದ್ಯದ ಷರತ್ತುಗಳನ್ನು ಪ್ರಕಟಿಸಲಿದೆ. ಅದಕ್ಕೆ ನಿರ್ದಿಷ್ಟ ದಿನಾಂಕ ಹೇಳಲು ಸಾಧ್ಯವಿಲ್ಲ, ಆದರೆ, ಅವರು ಅದನ್ನು ಶೀಘ್ರದಲ್ಲೇ ಕಳುಹಿಸುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ಆ ಅಧಿಕಾರಿ ಹೇಳಿದ್ದಾರೆ.

ಇನ್ನು ನ್ಯೂಜಿಲ್ಯಾಂಡ್ ತಂಡ ಇಂಗ್ಲೆಂಡ್​ನಲ್ಲಿ ಆತಿಥೇಯ ತಂಡದ ವಿರುದ್ಧ ಟೆಸ್ಟ್ ಚಾಂಪಿಯನ್​ಶಿಪ್​ಗೂ ಮುನ್ನ 2 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲಿದೆ. ಜೂನ್​ 2 ರಂದೇ ಇಂಗ್ಲೆಂಡ್​ಗೆ ತೆರಳಲಿರುವ ಭಾರತ ತಂಡ ಸೌತಾಂಪ್ಟನ್​ನಲ್ಲಿ ಕ್ವಾರಂಟೈನ್​ಗೆ ಒಳಗಾಗಾಗಲಿದೆ. ಇದು ಕಠಿಣವಾಗಿರುತ್ತದೆಯೋ ಅಥವಾ ಸಾಧಾರಣವಾಗಿರುತ್ತದೆಯೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅವರು ತಿಳಿಸಿದ್ದಾರೆ.

ಇದನ್ನು ಓದಿ: ವಾಷಿಂಗ್ಟನ್​ ಸುಂದರ್​ಗೆ ತನ್ನಿಂದ ಸೋಂಕು ತಗುಲಬಾರದೆಂಬ ಕಾರಣಕ್ಕೆ ತಂದೆಯಿಂದ ಈ ತ್ಯಾಗ!

ABOUT THE AUTHOR

...view details