ಕರ್ನಾಟಕ

karnataka

ETV Bharat / sports

ಪಾಕ್ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮರೂಫ್ ಮಹಿಳಾ ಕ್ರಿಕೆಟಿಗರಿಗೆ ಸ್ಫೂರ್ತಿ: ಸ್ಮೃತಿ ಮಂಧಾನ - ಬಿಸ್ಮಾ ಮರೂಫ್​ ಮಗಳು

ಪಾಕಿಸ್ತಾನದ ಮಹಿಳಾ ಕ್ರಿಕೆಟರ್‌ ಬಗ್ಗೆ ಮಂಧಾನ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾಯಿಯಾದ ನಂತರವೂ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಮುಂದುವರಿಯುವ ಸಲುವಾಗಿ ಮರೂಫ್​ ಅವರ ಈ ಪ್ರಯತ್ನ ಸಾಕಷ್ಟು ಮಹಿಳಾ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದ್ದಾರೆ.

Smriti Mandhana hails 'inspirational' Bismah Maroof
ಬಿಸ್ಮಾ ಮರೂಫ್ , ಸ್ಮೃತಿ ಮಂಧಾನ

By

Published : Mar 7, 2022, 6:57 PM IST

ಹ್ಯಾಮಿಲ್ಟನ್:ಮಗುವಿಗೆ ಜನ್ಮ ನೀಡಿದ 6 ತಿಂಗಳಲ್ಲಿ ಮೈದಾನಕ್ಕಿಳಿದು ಕ್ರಿಕೆಟ್​ ಆಡುತ್ತಿರುವ ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮರೂಫ್​ ಮಹಿಳಾ ಕ್ರಿಕೆಟಿಗರಿಗೆ ಸ್ಪೂರ್ತಿ ಎಂದು ಭಾರತ ತಂಡದ ಆರಂಭಿಕ ಬ್ಯಾಟರ್​ ಸ್ಮೃತಿ ಮಂಧಾನ ಶ್ಲಾಘಿಸಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 107ರನ್​​​ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಈ ಪಂದ್ಯ ಮುಗಿಯುತ್ತಿದ್ದಂತೆ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ ಸೇರಿದಂತೆ ಭಾರತ ತಂಡದ ಆಟಗಾರ್ತಿಯರು ಪಾಕಿಸ್ತಾನ ನಾಯಕಿ ಬಿಸ್ಮಾ ಮರೂಫ್ ಮಗಳಾದ ಫಾತಿಮಾ ಜೊತೆ ಕೆಲವು ಸಮಯ ಕಳೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗಿ ಕ್ರಿಕೆಟ್​ ಪ್ರೇಮಿಗಳ ಮನಸ್ಸು ಗೆದ್ದಿತ್ತು.

ಸ್ಮೃತಿ ಮಂಧಾನ ಇನ್​ಸ್ಟಾಗ್ರಾಮ್ ಸ್ಟೋರಿ

"ಮಗುವಿಗೆ ಜನ್ಮನೀಡಿದ ಕೇವಲ 6 ತಿಂಗಳಿಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿರುವುದು ಸ್ಪೂರ್ತಿದಾಯಕವಾಗಿದೆ. ಬಿಸ್ಮಾ ಮರೂಫ್ ವಿಶ್ವದಾದ್ಯಂತ ಮಹಿಳಾ ಕ್ರೀಡಾಪಟುಗಳಿಗೆ ಉದಾಹರಣೆಯಾಗಿದ್ದಾರೆ. ಭಾರತದಿಂದ ಬೇಬಿ ಫಾತಿಮಾ ಮೇಲೆ ಸಾಕಷ್ಟು ಪ್ರೀತಿಯಿದೆ. ಅವಳೂ ಕೂಡ ನಿಮ್ಮಂತೆಯೇ ಬ್ಯಾಟ್​ ಹಿಡಿಯಲಿದ್ದಾಳೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಎಡಚರು ತುಂಬಾ ವಿಶೇಷರು" ಎಂದು ಮಂಧಾನ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಭಾನುವಾರ ನಡೆದ ಉಭಯ ದೇಶಗಳ ನಡುವಿನ ಪಂದ್ಯದಲ್ಲಿ ಭಾರತ ತಂಡ 245 ರನ್​ಗಳಿಸಿತ್ತು. ಆದರೆ ಪಾಕಿಸ್ತಾನ ತಂಡ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (4 ವಿಕೆಟ್) ದಾಳಿಗೆ ಸಿಲುಕಿ ಇನ್ನೂ 7 ಓವರ್​ಗಳಿರುವಾಗಲೇ 137ಕ್ಕೆ ಆಲೌಟ್ ಆಗಿತ್ತು.

ಇದನ್ನೂ ಓದಿ:ರೋಹಿತ್ ಶರ್ಮಾ ನಾಯಕತ್ವಕ್ಕೆ 10ಕ್ಕೆ 9.5 ಅಂಕ ನೀಡುವೆ: ಗವಾಸ್ಕರ್

ABOUT THE AUTHOR

...view details