ವಾರ್ನರ್ ಪಾರ್ಕ್(ವೆಸ್ಟ್ ಇಂಡೀಸ್):ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ಒಬೆಡ್ ಮೆಕಾಯ್ ದಾಲಿಗೆ ತತ್ತರಿಸಿ ಸೋಲನುಭವಿಸಿದ್ದ ಭಾರತ ತಂಡ 3ನೇ ಟಿ-20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. 5 ಪಂದ್ಯಗಳ ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಪಡೆಯಿತು.
ಟಾಸ್ ಗೆದ್ದ ಭಾರತ ವೆಸ್ಟ್ ಇಂಡೀಸ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ವಿಂಡೀಸ್ನ ಆರಂಭಿಕ ಆಟಗಾರರಾದ ಬ್ರೆಂಡೆನ್ ಕಿಂಗ್ ಮತ್ತು ಕೈಲ್ ಮೇಯರ್ಸ್ ಮೊದಲ ವಿಕೆಟ್ಗೆ 57 ರನ್ ಕಲೆ ಹಾಕಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಕಿಂಗ್ಸ್ ಅಪಾಯಕಾರಿಯಾಗುವ ಮೊದಲೇ ಹಾರ್ದಿಕ್ ಪಾಂಡ್ಯ ಪೆವಿಲಿಯನ್ ದಾರಿ ತೋರಿಸಿದರು.
ಮೇಯರ್ಸ್ ಅರ್ಧಶತಕ:ಕಳೆದೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ವಿಂಡೀಸ್ನ ಆಲ್ರೌಂಡರ್ ಕೈಲ್ ಮೇಯರ್ಸ್ ಪಂದ್ಯದಲ್ಲಿ ಮಿಂಚಿದರು. ಅರ್ಧಶತಕ (73) ಗಳಿಸಿ ತಂಡಕ್ಕೆ ನೆರವಾದರು. ನಾಯಕ ನಿಕೋಲಸ್ ಪೂರನ್ 22, ರೋವ್ಮನ್ ಪೊವೆಲ್ 23, ಸಿಮ್ರಾನ್ ಹೆಟ್ಮಾಯಿರ್ 20 ಗಳಿಸಿದರು. 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ಗಳ ಸವಾಲಿನ ಮೊತ್ತ ದಾಖಲಿಸಿತು. ಭುವನೇಶ್ವರ್ ಕುಮಾರ್ 2, ಹಾರ್ದಿಕ್ ಪಾಂಡ್ಯಾ, ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.