ಸೇಂಟ್ ಲೂಸಿಯಾ: ಆಸ್ಟ್ರೇಲಿಯಾ ತಂಡದ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 40 ರನ್ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 2-0ಯಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಆ್ಯಂಡ್ರೆ ಫ್ಲೆಚರ್(9), ಲೆಂಡ್ಲ್ ಸಿಮೊನ್ಸ್(30) ಮತ್ತು ಕ್ರಿಸ್ ಗೇಲ್(13) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ 4ನೇ ಒಂದಾದ ಹೆಟ್ಮೆಯರ್ ಮತ್ತು ಡ್ವೇನ್ ಬ್ರಾವೋ ಶತಕದ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 61 ಎಸೆತಗಳಲ್ಲಿ 103 ರನ್ಗಳ ಜೊತೆಯಾಟ ನೀಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಹೆಟ್ಮೆಯರ್ 36 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 61 ರನ್ಗಳಿಸಿ ರನ್ಔಟ್ ಆದರೆ, ಬ್ರಾವೋ 34 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 47 ರನ್ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ಅಬ್ಬರಿಸಿದ ರಸೆಲ್ ಕೇವಲ 8 ಎಸೆತಗಳಲ್ಲಿ ತಲಾ 2 ಸಿಕ್ಸರ್ಗಳ ಸಹಿತ 24 ರನ್ಗಳಿಸಿದರು. ವಿಂಡೀಸ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್ಗಳಿಸಿತು.
ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ 18ಕ್ಕೆ1, ಆಶ್ಟನ್ ಅಗರ್ 28ಕ್ಕೆ1 ಮತ್ತು ಹೆಜಲ್ವುಡ್ 39ಕ್ಕೆ 1 ವಿಕೆಟ್ ಪಡೆದರು.