ಅಡಿಲೇಡ್ (ಆಸ್ಟ್ರೇಲಿಯಾ):ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ಟೀಂ ಇಂಡಿಯಾದ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಾಳೆ ನಡೆಯುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್, ದಿನೇಶ್ ಕಾರ್ತಿಕ್ ಬೆನ್ನುನೋವಿನ ಮೇಲೆ ನಿಗಾ ಇಡಲಾಗಿದೆ. ಅವರು ಮಂಗಳವಾರ ತಂಡದ ಜೊತೆಗೆ ನೆಟ್ನಲ್ಲಿ ಅಭ್ಯಾಸ ಮಾಡಿದರು. ವೈದ್ಯರ ಸಲಹೆಯ ಮೇರೆಗೆ ನಾಳಿನ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಆಡಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ನೆಟ್ನಲ್ಲಿ ದಿನೇಶ್ ಅಭ್ಯಾಸ:ನಾಳಿನ ಪಂದ್ಯದ ಸಿದ್ಧತೆಯಲ್ಲಿರುವ ಟೀಂ ಇಂಡಿಯಾ ಇಂದು ನೆಟ್ನಲ್ಲಿ ಬೆವರಿಳಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಪಾಯಿಂಟ್ ಪಟ್ಟಿಯಲ್ಲಿ 2 ನೇ ಸ್ಥಾನ ಪಡೆದಿದ್ದು, ಸೆಮಿಫೈನಲ್ ತಲುಪಲು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿದೆ.