ಕರ್ನಾಟಕ

karnataka

ETV Bharat / sports

ನಾಕೌಟ್​ ಪ್ರವೇಶಿಸಲು ನಾವು ಮುಂಬರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು: ಡೇವಿಡ್ ವಾರ್ನರ್​ - IPL 2022

9 ಪಂದ್ಯಗಳನ್ನಾಡಿರುವ ಡೆಲ್ಲಿ 8 ಅಂಕಗಳನ್ನು ಹೊಂದಿದ್ದು 7ನೇ ಸ್ಥಾನದಲ್ಲಿದೆ. ಆದರೆ ರನ್​ರೇಟ್​ ಉತ್ತಮವಾಗಿರುವುದರಿಂದ ಉಳಿದಿರುವ 5 ಪಂದ್ಯಗಳನ್ನು ಗೆದ್ದರೆ ನಾಕೌಟ್ ಪ್ರವೇಶ ಸಾಧ್ಯವಾಗಲಿದೆ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.

Warner on congested points table
ಡೇವಿಡ್ ವಾರ್ನರ್​ ಪ್ಲೇ ಆಫ್

By

Published : May 4, 2022, 4:29 PM IST

ಮುಂಬೈ: 15ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರಿಸ್ಥಿತಿ ಹಾವು ಏಣಿಯಾಟದಂತಾಗಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಡೆಲ್ಲಿ ತಂಡ ಈ ಬಾರಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಆಡಿರುವ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 5 ಸೋಲು ಕಂಡಿದೆ. ಉಳಿದಿರುವ 5 ಪಂದ್ಯಗಳನ್ನು ಗೆದ್ದರೆ ನಮಗೆ ನಾಕೌಟ್​ ಪ್ರವೇಶ ಖಚಿತವಾಗಲಿದೆ ಎಂದು ಸೀನಿಯರ್​ ಬ್ಯಾಟರ್​​ ಡೇವಿಡ್ ವಾರ್ನರ್​ ತಿಳಿಸಿದ್ದಾರೆ.

ಪ್ರಸ್ತುತ ಹೊಸ ತಂಡಗಳಾದ ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳೂ ಕ್ರಮವಾಗ 16 ಮತ್ತು 14 ಅಂಕಗಳನ್ನು ಹೊಂದಿದ್ದು, ತಮ್ಮ ಪ್ಲೇ ಆಫ್​​ ಪ್ರವೇಶವನ್ನು ಬಹುತೇಕ ಖಚಿತಗೊಳಿಸಿಕೊಂಡಿವೆ. ಆದರೆ ಉಳಿದೆರಡು ತಂಡದ ಸ್ಥಾನಕ್ಕೆ ಭಾರಿ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನ್ ರಾಯಲ್ಸ್, ಆರ್​ಸಿಬಿ, ಸನ್​ರೈಸರ್ಸ್ ಹೈದರಾಬಾದ್​, ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಪಂಜಾಬ್​ ತಂಡಗಳು ಪೈಪೋಟಿಯಲ್ಲಿವೆ. 9ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಭವಿಷ್ಯ ಇಂದಿನ ಫಲಿತಾಂಶದ ಮೇಲೆ ನಿಂತಿದೆ.

9 ಪಂದ್ಯಗಳನ್ನಾಡಿರುವ ಡೆಲ್ಲಿ 8 ಅಂಕಗಳನ್ನು ಹೊಂದಿದೆ. ಆದರೆ ರನ್​ರೇಟ್​ ಉತ್ತಮವಾಗಿರುವುದರಿಂದ ಉಳಿದಿರುವ 5 ಪಂದ್ಯಗಳನ್ನು ಗೆದ್ದರೆ ನಾಕೌಟ್ ಪ್ರವೇಶಸಾಧ್ಯವಾಗಲಿದೆ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.

"ನಾವು ಇಲ್ಲಿಂದ ಫೈನಲ್‌ ಪ್ರವೇಶಿಸಲು ಉಳಿದಿರುವ ಪ್ರತಿ ಪಂದ್ಯವನ್ನು ಗೆಲ್ಲಲೇಬೇಕು. ಟೂರ್ನಿಯಲ್ಲಿ ಪ್ರಬಲ ಪೈಪೋಟಿ ಇದೆ, ನಾವು ಎರಡು ತಂಡಗಳನ್ನು ಹಿಂದಿಕ್ಕಿ ಬರಬೇಕಿದೆ. ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್, ಅವರು ನಮಗೆ 2 ಅಂಕ ಹೆಚ್ಚು ಅಂಕಗಳನ್ನು ಹೊಂದಿದ್ದಾರೆ. ನಾಳೆ ನಡೆಯುವ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಮೇಲುಗೈ ಸಾಧಿಸಿದರೆ, ಅಗ್ರ 4ಕ್ಕೆ ಪ್ರವೇಶಿಸಲಿದ್ದೇವೆ.

ಆದರೆ ನಮಗೆ ಇದು ಸಾಧ್ಯವಾಗಬೇಕಾದರೆ ಆರ್​ಸಿಬಿ ಇಂದಿನ ಪಂದ್ಯದಿಂದ ಸೋಲು ಕಾಣಬೇಕಿದೆ. ಈ ಪಟ್ಟಿ ನಮಗೆ ತುಂಬಾ ಅಡಚಣೆಯಿಂದ ಕೂಡಿದೆ, ಆದರೆ ಉಳಿದಿರುವ ಟೂರ್ನಿ ಬಹಳ ರೋಚಕವಾಗಲಿದೆ ಎಂದು ಆಸೀಸ್ ಓಪನರ್​ ತಿಳಿಸಿದ್ದಾರೆ.

ಕೆಲವು ಚೇಸಿಂಗ್ ಪಂದ್ಯಗಳಲ್ಲಿ ಸರಿಯಾಗಿ ಚೇಸ್​ ಮಾಡದ ಕಾರಣ ಡೆಲ್ಲಿ ಇಂದು ಕಠಿಣ ಪರಿಸ್ಥಿತಿಗೆ ಸಿಲುಕಲು ಕಾರಣ ಎಂದು ವಾರ್ನರ್​ ಒಪ್ಪಿಕೊಂಡಿದ್ದಾರೆ. " ನೀವು ಕೆಲವು ಪಂದ್ಯಗಳ ಫಲಿತಾಂಶ ನೋಡಿ, ನಾವು ಕೆಲವು ದೊಡ್ಡ ಮೊತ್ತವನ್ನು ಚೇಸ್​ ಮಾಡುವಾಗ ತುಂಬಾ ಹತ್ತಿರ ಹೋಗಿ ಮಿಸ್​ ಮಾಡಿಕೊಂಡೆವು. ಅವರು ನಮಗೆ ಸಮಸ್ಯೆಯನ್ನು ತಂದರು ಎಂದು ವಾರ್ನರ್ ತಿಳಿಸಿದ್ದಾರೆ.

ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಲಖನೌ ವಿರುದ್ಧ 196ರನ್​ ಚೇಸಿಂಗ್ ಮಾಡುವ ವೇಳೆ ಕೇವಲ 6 ರನ್​ಗಳಿಂದ, ರಾಜಸ್ಥಾನ್ ವಿರುದ್ಧ 213 ರನ್​ ಚೇಸ್​ ಮಾಡುವ ವೇಳೆ 15 ರನ್​ಗಳಿಂದ ಸೋಲು ಕಂಡಿತ್ತು. ಆದರೆ ಒಂದು ಹಂತದಲ್ಲಿ ಈ ಎರಡೂ ಪಂದ್ಯಗಳನ್ನೂ ಡೆಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದರೂ ಕೊನೆಯ ಒಂದೆರಡು ಓವರ್​ಗಳಲ್ಲಿ ಎಡವಿ ಸೋಲು ಕಂಡಿತ್ತು.

ABOUT THE AUTHOR

...view details