ಕಾನ್ಪುರ:ಮಾಜಿ ಸ್ಪಿನ್ನರ್ಹರ್ಭಜನ್ ಸಿಂಗ್ ಅವರ 417 ಟೆಸ್ಟ್ ವಿಕೆಟ್ ದಾಖಲೆ ಹಿಂದಿಕ್ಕಿರುವುದು 'ಅದ್ಭುತ ಮೈಲಿಗಲ್ಲು' ಎಂದು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಇಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಬಳಿಕ ಸಹ ಆಟಗಾರ ಶ್ರೇಯಸ್ ಅಯ್ಯರ್ ಜತೆ ನಡೆಸಿದ ಸಂವಾದದಲ್ಲಿ ಅಶ್ವಿನ್ ಹರ್ಭಜನ್ ಸಿಂಗ್ ಅವರ ದಾಖಲೆ ಮುರಿದಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ನಾನು ಮೊದಲು ಬ್ಯಾಟಿಂಗ್ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೆ. ಬಳಿಕ 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ - ಗವಾಸ್ಕರ್ ಟೆಸ್ಟ್ನಲ್ಲಿ ಹರ್ಭಜನ್ ಸಿಂಗ್ ಅವರು ಬೌಲ್ ಮಾಡಿದ ರೀತಿಗೆ ಫಿದಾ ಆಗಿ, ಅವರಂತೆ ನಾನೂ ಕೂಡ ಸ್ಪಿನ್ ಬೌಲರ್ ಆಗಬೇಕೆಂದುಕೊಂಡೆ. ನಾನು ಪರಿಪೂರ್ಣ ಸ್ಪಿನ್ ಬೌಲರ್ ಆಗಲು ಭಜ್ಜಿ ಕಾರಣ ಎಂದಿದ್ದಾರೆ.