ಲಾರ್ಡ್ಸ್(ಲಂಡನ್):ಆತಿಥೇಯ ಇಂಗ್ಲೆಂಡ್ ಹಾಗೂ ಪ್ರವಾಸಿ ಭಾರತದ ನಡುವೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 364ರನ್ಗಳಿಗೆ ಆಲೌಟ್ ಆಗಿದೆ. ತಂಡದ ಪರ ಕನ್ನಡಿಗ ರಾಹುಲ್ 129ರನ್ಗಳಿಕೆ ಮಾಡಿ ಮಿಂಚಿದರೆ, ಪ್ರಮುಖ ಬ್ಯಾಟ್ಸಮನ್ಗಳಾದ ರಹಾನೆ ಹಾಗೂ ಪೂಜಾರ ವೈಫಲ್ಯ ಅನುಭವಿಸಿದ್ದಾರೆ.
ಉಪನಾಯಕ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಮೇಲಿಂದ ಮೇಲೆ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ತುಂಬಲಾರದ ನಷ್ಟವಾಗಿದ್ದು, ಇದೇ ವಿಷಯಕ್ಕೆ ಸಂಬಂದಿಸಿದಂತೆ ಕೆ.ಎಲ್ ರಾಹುಲ್ ಮಾತನಾಡಿದ್ದಾರೆ. ರನ್ಗಳಿಕೆ ಮಾಡಲು ಹೆಣಗಾಡುತ್ತಿರುವ ಪೂಜಾರಾ ಹಾಗೂ ರಹಾನೆ ಆದಷ್ಟು ಬೇಗ ತಮ್ಮ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂದಿರುವ ರಾಹುಲ್, ಅವರಿಬ್ಬರು ವಿಶ್ವ ದರ್ಜೆ ಪ್ಲೇಯರ್ಸ್ಗಳು ಎಂದಿದ್ದಾರೆ. ಭಾರತ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಸಂದರ್ಭಗಳಲ್ಲಿ ಪೂಜಾರಾ ಹಾಗೂ ರಹಾನೆ ತಂಡಕ್ಕೆ ಸಾಥ್ ನೀಡಿದ್ದು, ಆದಷ್ಟು ಬೇಗ ಕಳಪೆ ಫಾರ್ಮ್ನಿಂದ ಹೊರಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ರಾಹುಲ್, ಇಂಗ್ಲೆಂಡ್ನಲ್ಲಿ ಬ್ಯಾಟ್ ಮಾಡುವುದು ತುಂಬಾ ಕಠಿಣ. ಪ್ರತಿಯೊಂದು ಇನ್ನಿಂಗ್ಸ್ನಲ್ಲಿ ರನ್ಗಳಿಕೆ ಮಾಡುವುದು ಸುಲಭವಾದ ಕೆಲಸವಲ್ಲ. ಉತ್ತಮ ಆರಂಭ ಪಡೆದುಕೊಂಡರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದಿದ್ದಾರೆ.