ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ 68ಕ್ಕೆ ಆಲೌಟ್​ : ಭಾರತವನ್ನು ಗೇಲಿ ಮಾಡಿದ್ದ ಮೈಕಲ್​ ವಾನ್​​ರನ್ನು ಟ್ರೋಲ್​ ಮಾಡಿದ ಜಾಫರ್​ - ಇಂಗ್ಲೆಂಡ್ vs ಆಸ್ಟ್ರೇಲಿಯಾ ಟೆಸ್ಟ್​

ಮೈಕಲ್ ವಾನ್​ ಮತ್ತು ವಾಸಿಮ್ ಜಾಫರ್ ನಡುವೆ ಆನ್​ಲೈನ್​ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುತ್ತಿರುತ್ತಾರೆ. ಇದು ಕಳೆದ 2 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಸದ್ಯಕ್ಕೆ ಜಾಫರ್ ಮಾಡಿರುವ ಟ್ವೀಟ್​ಗೆ ಮೈಕಲ್ ವಾನ್​ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..

Wasim Jaffer trolls Michael Vaughan
ಮೈಕಲ್​ ವಾನ್​​ರನ್ನು ಟ್ರೋಲ್​ ಮಾಡಿದ ಜಾಫರ್

By

Published : Dec 28, 2021, 3:45 PM IST

ಮೆಲ್ಬೋರ್ನ್ :ಆ್ಯಶಸ್​ ಟೆಸ್ಟ್​ ಸರಣಿಯ 3ನೇ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ 3ನೇ ದಿನ ಕೇವಲ 68 ರನ್‌ಗೆ ಆಲೌಟ್​ ಆಗುವ ಮೂಲಕ ಆ್ಯಶಸ್​ ಸರಣಿಯನ್ನು ಯಾವುದೇ ಪ್ರತಿರೋಧವಿಲ್ಲದೆ ಕಳೆದುಕೊಂಡಿದೆ.

ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಬಾಕ್ಸಿಂಗ್​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 185ಕ್ಕೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 267 ರನ್​ಗಳಿಸಿ 82 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಪಡೆದುಕೊಂಡಿತ್ತು.

2ನೇ ದಿನ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್​ 31 ರನ್​ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. 3ನೇ ದಿನವಾದ ಮಂಗಳವಾರ ಸ್ಕಾಟ್​ ಬೋಲೆಂಡ್​ ದಾಳಿಗೆ ತತ್ತರಿಸಿದ ಇಂಗ್ಲೆಂಡ್​ 68 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್​ ಹಾಗೂ 14 ರನ್​ಗಳ ಹೀನಾಯ ಸೋಲು ಕಂಡಿತು.

2019ರಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 92 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಸಂದರ್ಭದಲ್ಲಿ ವಾನ್​, ಭಾರತ 92ಕ್ಕೆ ಆಲೌಟ್ ಆಗಿದೆ. ಈ ದಿನಗಳಲ್ಲಿ 100ರೊಳಗೆ ಯಾವುದೇ ತಂಡ ಆಲೌಟ್​ ಆಗುವುದನ್ನ ನಂಬುವುದಕ್ಕಾಗುವುದಿಲ್ಲ ಎಂದು ಗೇಲಿ ಮಾಡಿ ಟ್ವೀಟ್​ ಮಾಡಿದ್ದರು.

ಇದೀಗ ಮಂಗಳವಾರ ಇಂಗ್ಲೆಂಡ್​ 68 ರನ್​ಗಳಿಗೆ ಆಲೌಟ್ ಆಗಿದ್ದಕ್ಕೆ ಜಾಫರ್​ ಮೈಕಲ್​ ವಾನ್​ರ ಹಳೆಯ ಟ್ವೀಟ್​ ಶೇರ್​ ಮಾಡಿದ್ದು, ಇಂಗ್ಲೆಂಡ್​ 68ಕ್ಕೆ ಆಲೌಟ್​ ಎಂದು ಬರೆದು ಮೈಕಲ್​ ವಾನ್​ಗೆ ಟ್ಯಾಗ್​ ಮಾಡಿದ್ದಾರೆ.

ಈ ಟ್ವೀಟ್ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈಗಾಗಲೇ 7.5 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. 11.7 ಸಾವಿರ ಮಂದಿ ಮರು ಟ್ವೀಟ್ ಮಾಡಿಕೊಂಡಿದ್ದರೆ 65 ಸಾವಿರಕ್ಕೂ ಹೆಚ್ಚು ಲೈಕ್​ ಮತ್ತು 1600ಕ್ಕೂ ಹೆಚ್ಚು ಮಂದಿ ಕಮೆಂಟ್​ ಮಾಡಿದ್ದಾರೆ.

ಮೈಕಲ್ ವಾನ್​ ಮತ್ತು ವಾಸಿಮ್ ಜಾಫರ್ ನಡುವೆ ಆನ್​ಲೈನ್​ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುತ್ತಿರುತ್ತಾರೆ. ಇದು ಕಳೆದ 2 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಸದ್ಯಕ್ಕೆ ಜಾಫರ್ ಮಾಡಿರುವ ಟ್ವೀಟ್​ಗೆ ಮೈಕಲ್ ವಾನ್​ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:ಇಂಗ್ಲೆಂಡ್​ಗೆ ಹೀನಾಯ ಸೋಲು.. ಆ್ಯಶಸ್​ ಕಪ್​ ಮರಳಿ ಪಡೆದ ಆಸ್ಟ್ರೇಲಿಯಾ!

ABOUT THE AUTHOR

...view details