ನವದೆಹಲಿ :ವಿರಾಟ್ ಕೊಹ್ಲಿ ಈ ಹೆಸರು ಚಿಕ್ಕವರಿಂದ ಹಿಡಿದು ವಯಸ್ಸಾದವರೆಗೆ ಗೊತ್ತಿರುವ ಹೆಸರು. ಏಕೆಂದರೇ ಭಾರತ ತಂಡದ ಮಾಜಿ ನಾಯಕ, ರನ್ ಮಷಿನ್, ದಾಖಲೆ ಸರಾದರ ವಿರಾಟ್ ಕೊಹ್ಲಿ ತನ್ನ ಅದ್ಬುತ ಆಟದಿಂದಲ್ಲೇ ಕ್ರಿಕೆಟ್ ಲೋಕದಲ್ಲಿ ಛಾಪು ಮೂಡಿಸಿರುವ ಸ್ಟಾರ್ ಆಟಗಾರ. ವಿರಾಟ್ ಕೊಹ್ಲಿ ಕಳೆದ ಕೆಲ ವರ್ಷಗಳಿಂದ ಕೊಂಚ ನಿಶ್ಯಬ್ದವಾಗಿದ್ದರೂ ದಾಖಲೆ ನಿರ್ಮಿಸುವ ವಿಚಾರದಲ್ಲಿ ಕಿಂಗ್ ಆಫ್ ಕ್ರಿಕೆಟ್ ಅಂತಾನೆ ಪ್ರಸಿದ್ದಿಗಳಿಸಿದ್ದಾರೆ.
ಕೊಹ್ಲಿ ಆಡುವ ಪಂದ್ಯಗಳಲ್ಲಿ ಒಂದಲ್ಲ ಒಂದು ದಾಖಲೆಯ ಸದ್ದು ಮಾಡುತ್ತಲೇ ಇರುತ್ತವೆ. ಈಗ ಮತ್ತೊಂದು ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಡೊಮಿನಿಕಾ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಕೊಹ್ಲಿ 36 ರನ್ ಗಳಿಸಿ ಅಜೇಯರಾಗಿ ಮರಳಿದರು. ಈ ಇನ್ನಿಂಗ್ಸ್‌ನಲ್ಲಿ, ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಪರ 2 ತ್ರಿಶತಕಗಳನ್ನು ಗಳಿಸಿದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರ ಟೆಸ್ಟ್ ರನ್ ದಾಖಲೆಯನ್ನು ಕೊಹ್ಲಿ ಮುರಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5ನೇ ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಕ್ರಿಕೆಟ್ ವೃತ್ತಿ ಜೇವನದಿಂದಲ್ಲೇ ದೂರ ಸರಿದಿರುವ ಸೆಹ್ವಾಗ್ 8503 ರನ್‌ಗಳಿಸಿದ್ದರು. ಕೊಹ್ಲಿ 110 ಪಂದ್ಯಗಳಲ್ಲಿ ಆಡಿ 8515 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಭಾರತ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ನಾವು ನೋಡುವುದಾರೆ, ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 200 ಪಂದ್ಯಗಳಿಂದ 15,921 ಟೆಸ್ಟ್ ರನ್ ಕಲೆಹಾಕಿದ್ದಾರೆ. ಇನ್ನು 164 ಟೆಸ್ಟ್ ಪಂದ್ಯಗಳನ್ನು ಆಡಿರುವ ರಾಹುಲ್ ದ್ರಾವಿಡ್ 13288 ಟೆಸ್ಟ್ ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 125 ಟೆಸ್ಟ್ ಪಂದ್ಯಗಳಲ್ಲಿ 10122 ರನ್ ಗಳಿಸಿರುವ ಮಾಜಿ ಆರಂಭಿಕ ಆಟಗಾರ ಸುನಿಲ್ ಗವಾಸ್ಕರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ವಿವಿಎಸ್ ಲಕ್ಷ್ಮಣ್ 134 ಪಂದ್ಯಗಳಲ್ಲಿ 8,781 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್ ಅಂಕಿ - ಅಂಶ : ವಿರಾಟ್ ಕೊಹ್ಲಿಯ ಸಂಪೂರ್ಣ ಟೆಸ್ಟ್ ಕ್ರಿಕೆಟ್ ವೃತ್ತಿಜೀವನ ನೋಡುವುದಾದರೆ, ಈವರೆಗೆ 110 ಪಂದ್ಯಗಳನ್ನು ಆಡಿರುವ ಕೊಹ್ಲಿ 8,515 ರನ್ ಕಲೆಹಾಕಿದ್ದಾರೆ. ಸರಾಸರಿ 55.23 ರಲ್ಲಿ ಬ್ಯಾಟ್ ಬೀಸಿದ್ದು, 7 ದ್ವಿಶತಕ, 28 ಶತಕ ಹಾಗೂ 28 ಅರ್ಧಶತಕಗಳಿಸಿದ್ದಾರೆ. 951 ಪೋರ್ ಹಾಗೂ 24 ಸಿಕ್ಸ್ ಹೊಡೆದಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೇ, ಕೊಹ್ಲಿ ಟೆಸ್ಟ್ನಲ್ಲಿ ಕಡೆಮೆ ಸಿಕ್ಸ್ ಹೊಡೆದಿದ್ದು, ಇನ್ನೊಂದೆಡೆ ಹಲವಾರು ಕ್ರಿಕೆಟ್ ದಿಗ್ಗಜರ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.
ಇದನ್ನೂ ಓದಿ :12 ವರ್ಷಗಳ ಹಳೆಯ ವೆಸ್ಟ್ ಇಂಡೀಸ್ ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕಿದ ರಾಹುಲ್ & ವಿರಾಟ್..