ಹೈದರಾಬಾದ್: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಸುರೇಶ್ ಬಾತ್ರಾ (53) ನಿಧನರಾಗಿದ್ದಾರೆ.
ಇಂದು ಬೆಳಗ್ಗೆ ಪ್ರಾರ್ಥನೆ ಮಾಡುತ್ತಿದ್ದ ವೇಳೆ ದಿಢೀರ್ ಆಗಿ ಕುಸಿದು ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪಶ್ಚಿಮ ಡೆಲ್ಲಿ ಕ್ರಿಕೆಟ್ ಅಕ್ಯಾಡೆಮಿ ಕೋಚ್ ಆಗಿದ್ದ ಇವರು, ವಿರಾಟ್ ಕೊಹ್ಲಿಗೆ ಬಾಲ್ಯದಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಸುರೇಶ್ ಬಾತ್ರಾ ಇದನ್ನೂ ಓದಿ: 'ದೀದಿ ಇಲ್ಲದೇ ಬದುಕಲಾರೆ'... ಬಿಜೆಪಿ ಸೇರಿದ್ದ ಸೋನಾಲಿಯಿಂದ ಟಿಎಂಸಿಗೆ ಮರಳುವ ಇಂಗಿತ
ದೆಹಲಿ ಮೂಲದ ಸುರೇಶ್ ಬಾತ್ರಾ, ದೆಹಲಿ ಆಟಗಾರರಾದ ಮಂಜೋತ್ ಕಲ್ರಾ ಮತ್ತು ವರುಣ್ ಸೋದ್ ಸೇರಿದಂತೆ ಅನೇಕ ಇತರೆ ಕ್ರಿಕೆಟಿಗರ ವೃತ್ತಿ ಜೀವನ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಕಲ್ರಾ ನ್ಯೂಜಿಲ್ಯಾಂಡ್ನಲ್ಲಿ ನಡೆದ 2018ರ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು. ಫೈನಲ್ ಪಂದ್ಯದಲ್ಲಿ ಕಲ್ರಾ ಶತಕ ಸಹ ಸಿಡಿಸಿದ್ದರು.