ಕರ್ನಾಟಕ

karnataka

ETV Bharat / sports

"ಟೆಸ್ಟ್​" ಪಾಸಾದ ವಿರಾಟ್​ ಕೊಹ್ಲಿ: 28ನೇ ಶತಕ ಸಿಡಿಸಿ ಸಂಭ್ರಮ! - ETV Bharath Kannada news

ಬಾರ್ಡರ್-ಗವಾಸ್ಕರ್​ ಟ್ರೋಫಿಯ ನಾಲ್ಕನೇ ಟೆಸ್ಟ್​ನ ನಾಲ್ಕನೇ ದಿನದ ಎರಡನೇ ಸೆಷನ್​ನಲ್ಲಿ ವಿರಾಟ್​ ಟೆಸ್ಟ್​​ ಕ್ರಿಕೆಟ್​ನ​ 28ನೇ ಶತಕ ದಾಖಲಿಸಿದರು.

Virat Kohli century
28ನೇ ಹಂಡ್ರೆಡ್​ ದಾಖಲಿಸಿದ ಕೊಹ್ಲಿ

By

Published : Mar 12, 2023, 1:04 PM IST

Updated : Mar 12, 2023, 2:13 PM IST

ಅಹಮದಾಬಾದ್​: ಏಕದಿನ ಮತ್ತು ಟಿ20ಯಲ್ಲಿ ಶತಕದ ಬರ ನೀಗಿಸಿಕೊಂಡಿದ್ದ ವಿರಾಟ್​ ಕೊಹ್ಲಿ ಇದೀಗ 'ಟೆಸ್ಟ್​' ಕೂಡಾ ಪಾಸ್​ ಆಗಿದ್ದಾರೆ. 2019ರ ಬಳಿಕ ಅವರು ಇಂದು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ನಲ್ಲಿ ಮೊದಲ ಶತಕ ಬಾರಿಸಿದರು. ಟೆಸ್ಟ್​ ಕ್ರಿಕೆಟ್​ನಲ್ಲಿ 28ನೇ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 75ನೇ ಶತಕ ಸಿಡಿಸಿ ಕೊಹ್ಲಿ ಸಂಭ್ರಮಿಸಿದರು.

241 ಎಸೆತಗಳಲ್ಲಿ ಶತಕ ಸಾಧನೆ ತೋರಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು. ಇಷ್ಟು ಎಸೆತಗಳನ್ನು​ ಎದುರಿಸಿ ನಿಧಾನಗತಿಯಲ್ಲಿ ಶತಕ ಗಳಿಸಿರುವ ಅವರ ಎರಡನೇ ಇನ್ನಿಂಗ್ಸ್​ ಇದಾಗಿದೆ. ಅಲ್ಲದೇ, ಆಸಿಸ್​ ವಿರುದ್ಧದ 16 ಶತಕ ಕೂಡಾ ಹೌದು. ಆಸ್ಟ್ರೇಲಿಯಾ ವಿರುದ್ಧ ಸಚಿನ್​ ತೆಂಡೂಲ್ಕರ್​ 20 ಶತಕ ಗಳಿಸಿದ್ದು, ಒಂದು ದೇಶದ ವಿರುದ್ಧ ಗಳಿಸಿರುವ ಅತೀ ಹೆಚ್ಚಿನ ಶತಕ ದಾಖಲೆ ಇದಾಗಿದೆ.

1,205 ದಿನದ ನಂತರ ವಿರಾಟ್​ ಬ್ಯಾಟ್​ನಿಂದ ಶತಕ ಬಂದಿದೆ. ನವೆಂಬರ್ 2019 ರಂದು ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ಮೊಟ್ಟಮೊದಲ ಪಿಂಕ್ ಬಾಲ್ ಟೆಸ್ಟ್‌ನಲ್ಲಿ 136 ರನ್ ಗಳಿಸಿದ ನಂತರ ಕೊಹ್ಲಿ ಟೆಸ್ಟ್ ಶತಕ ಗಳಿಸಿರಲಿಲ್ಲ. 41 ಇನ್ನಿಂಗ್ಸ್​ ಆಡಿದ ನಂತರ ವಿರಾಟ್​ ಅವರ ಶತಕ ದಾಖಲಾಗಿದೆ.

ತವರಿನಲ್ಲಿ 14 ಟೆಸ್ಟ್ ಶತಕ:ಕೊಹ್ಲಿ ಇಲ್ಲಿಯವರೆಗೆ ಭಾರತದ ನೆಲದಲ್ಲಿ 14 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಶತಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಈ ಶತಕದಿಂದ ಮೊಹಮ್ಮದ್ ಅಜರುದ್ದೀನ್ ಶತಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಸರಿದಿದ್ದಾರೆ. ತೆಂಡೂಲ್ಕರ್ 22, ಗವಾಸ್ಕರ್ 16 ಮತ್ತು ದ್ರಾವಿಡ್ 15 ಶತಕ ಗಳಿಸಿದ್ದು ಮೊದಲ ಮೂರು ಸ್ಥಾನದಲ್ಲಿದ್ದಾರೆ.

ತವರಿನಲ್ಲಿ 4,000 ರನ್:ನಿನ್ನೆ ವಿರಾಟ್​ 44 ರನ್​ ಗಳಿಸುತ್ತಿದ್ದಂತೆ ತವರಿನಲ್ಲಿ ಟೆಸ್ಟ್​ನಲ್ಲಿ 4,000 ಗಳಿಸಿದ ದಾಖಲೆ ಮಾಡಿದರು. ನಾಲ್ಕು ಸಹಸ್ರ ರನ್​ ದಾಖಲಿಸಿದ ಭಾರತದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಚಿನ್ ತೆಂಡೂಲ್ಕರ್ (7,216), ರಾಹುಲ್ ದ್ರಾವಿಡ್ (5,598), ಸುನಿಲ್ ಗವಾಸ್ಕರ್ (5,067) ಮತ್ತು ವೀರೇಂದ್ರ ಸೆಹ್ವಾಗ್ (4,656) ಮೊದಲ ನಾಲ್ಕು ಸ್ಥಾನದಲ್ಲಿದ್ದಾರೆ. ವಿರಾಟ್​ ಕೊಹ್ಲಿ ಕೇವಲ 77 ಇನ್ನಿಂಗ್ಸ್​ಗಳಿಂದ ಈ ದಾಖಲೆ ಬರೆದಿದ್ದಾರೆ. ಗವಾಸ್ಕರ್ 87 ಮತ್ತು ದ್ರಾವಿಡ್ 88 ಇನ್ನಿಂಗ್ಸ್​ನಿಂದ 4,000 ರನ್​ ಗಳಿಸಿಸಿದ್ದರು.

ಅತಿ ವೇಗವಾಗಿ 25,000 ಪೂರೈಸಿದ ವಿರಾಟ್​:ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಎರಡನೇ ಪಂದ್ಯದಲ್ಲಿ ಅತಿ ವೇಗ 25 ಸಾವಿರ ರನ್​ ಮೈಲಿಗಲ್ಲನ್ನು ವಿರಾಟ್​ ಸಾಧಿಸಿದ್ದರು.ಅಂತಾರಾಷ್ಟ್ರೀಯ ಕ್ರಿಕೆಟ್​ನ ವೃತ್ತಿ ಜೀವನದ 549 ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ​ 25 ಸಾವಿರ ರನ್​ಗಳ ಪೂರೈಸಿದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್​ 577 ಇನ್ನಿಂಗ್ಸ್​ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 588 ಇನ್ನಿಂಗ್ಸ್​​ನಲ್ಲಿ ಈ ಸಾಧನೆ ಮಾಡಿದ್ದರು.

25,000 ರನ್ ಬಾರಿಸಿದ 6ನೇ ಆಟಗಾರ: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್​ ಬಾರಿಸಿ ಆರನೇ ಆಟಗಾರರ ಕೊಹ್ಲಿ ಆಗಿದ್ದಾರೆ. ಆದರೆ, ಕಡಿಮೆ ಇನ್ನಿಂಗ್ಸ್​​ನಲ್ಲಿ ಈ ಸಾಧನೆಯನ್ನು ವಿರಾಟ್​ ಮಾಡಿದ್ದಾರೆ. ಸಚಿನ್​ ತಮ್ಮ ಕ್ರಿಕೆಟ್​​ ವೃತ್ತಿ ಜೀವನದಲ್ಲಿ ಒಟ್ಟಾರೆ 34,437 ರನ್​ಗಳು ಬಾರಿಸಿದ್ದು, ಅತಿ ಹೆಚ್ಚು ಸಿಡಿಸಿ ಆಟಗಾರರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ (28,016) ಮತ್ತು ರಿಕಿ ಪಾಂಟಿಂಗ್ (27,483) ನಂತರದ ಎರಡು ಸ್ಥಾನಗಳನ್ನು ಹೊಂದಿದ್ದಾರೆ. ಇವರ ನಂತರದಲ್ಲಿ ಶ್ರೀಲಂಕಾದ ಮತ್ತೊಬ್ಬ ಆಟಗಾರ ಮಹೇಲಾ ಜಯವರ್ಧನೆ (25,957), ದಕ್ಷಿಣ ಆಫ್ರಿಕಾದ ಜಾಕ್​ ಕಾಲಿಸ್​ (25,534) ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಈ ಸಾಲಿಗೆ ವಿರಾಟ್​ ಕೊಹ್ಲಿ ಸೇರ್ಪಡೆಯಾಗಿದ್ದು, ಒಟ್ಟಾರೆ 25,002 ಬಾರಿಸಿದ್ದಾರೆ.

ಇದನ್ನೂ ಓದಿ:ತವರಿನಲ್ಲಿ 4000 ರನ್​ ಪೂರೈಸಿದ ವಿರಾಟ್​

Last Updated : Mar 12, 2023, 2:13 PM IST

ABOUT THE AUTHOR

...view details