ನವದೆಹಲಿ:ಭಾರತ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಇರುವ ವೈಮನಸ್ಸಿನಿಂದಾಗಿ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು ಎಂದು ತಾವು ಬರೆದ ಪುಸ್ತಕದಲ್ಲಿ ನಮೂದಿಸಿ ಚರ್ಚೆಗೆ ಗ್ರಾಸವಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮಾಜಿ ಸಿಒಎ (ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಮುಖ್ಯಸ್ಥ) ವಿನೋದ್ ರಾಯ್ ವಿನೋದ್ ರೈ ತಮ್ಮ ಪುಸ್ತಕವನ್ನು ಸಮರ್ಥಿಸಿಕೊಂಡಿದ್ದಾರೆ.
ವಿನೋದ್ ರೈ ಅವರು ಬರೆದ 'ನಾಟ್ ಜಸ್ಟ್ ಎ ನೈಟ್ ವಾಚ್‌ಮ್ಯಾನ್: ಮೈ ಇನ್ನಿಂಗ್ಸ್ ಇನ್ ದಿ ಬಿಸಿಸಿಐ' ಎಂಬ ಪುಸ್ತಕದಲ್ಲಿ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಅವರ ಬಗ್ಗೆ ಪ್ರಸ್ತಾಪವಾಗಿದ್ದು, ಅದರಲ್ಲಿ ಕುಂಬ್ಳೆ ಅವರ ಅತಿಯಾದ ಶಿಸ್ತಿನಿಂದಾಗಿ ವಿರಾಟ್ ಬೇಸರಗೊಂಡಿದ್ದರು. ಇದು ಇಬ್ಬರ ಮಧ್ಯೆ ಅಂತರ ಮೂಡಿಸಿತ್ತು ಎಂದು ಬರೆದಿರುವುದು ಕ್ರಿಕೆಟ್ ಅಂಗಳದಲ್ಲಿ ಚರ್ಚೆ ಉಂಟು ಮಾಡಿದೆ.