ಹೈದರಾಬಾದ್:ಭಾರತ ಮತ್ತು ಪಾಕಿಸ್ತಾನ ಎಂದಾಗ ಮೊದಲು ಕೇಳಿ ಬರುವ ಪದ ಸಾಂಪ್ರದಾಯಿಕ ಎದುರಾಳಿಗಳು ಎಂದು. ಇದು ಕ್ರೀಡೆಯಲ್ಲೂ ಬಿಂಬಿತವಾಗುತ್ತಿರುತ್ತದೆ. ಅದರಲ್ಲೂ ಭಾರತ - ಪಾಕಿಸ್ತಾನದ ನಡುವ ನಡೆಯುವ ಕ್ರಿಕೆಟ್ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳಿರುತ್ತದೆ. 2019ರ ವಿಶ್ವಕಪ್ ನಂತರ ಭಾತರ ಪಾಕ್ ಏಕದಿನ ಪಂದ್ಯದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಖಾಮುಖಿ ಆಗಿತ್ತು. ಆದರೆ, ಈ ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯ ಮಳೆಯಿಂದ ರದ್ದಾಯಿತು.
ಕೇವಲ ಭಾರತದ ಬ್ಯಾಟಿಂಗ್ ಮಾತ್ರ ಮಳೆ ಅವಕಾಶ ನೀಡಿತು ನಂತರ ಎರಡನೇ ಇನ್ನಿಂಗ್ಸ್ ವೇಳೆ ಸುರಿದ ಮಳೆ ಬಿಡುವು ನೀಡದ ಕಾರಣ ಉಭಯ ತಂಡಕ್ಕೆ ತಲಾ ಒಂದು ಅಂಕ ಹಂಚಿ ಫಲಿತಾಂಶ ರಹಿತ ಪಂದ್ಯ ಎಂದು ಪ್ರಕಟಿಸಲಾಯಿತು. ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ್ದ ಭಾರತ 266 ರನ್ಗಳನ್ನು ಮಧ್ಯಮ ಕ್ರಮಾಂಕದ ಉತ್ತಮ ಪ್ರದರ್ಶನದಿಂದ ಕಲೆಹಾಕಿತ್ತು. ಇದರಲ್ಲಿ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು.
ಈ ಪಂದ್ಯ ಸ್ಥಗಿತವಾಗಿದ್ದಕ್ಕೆ ಹೆಚ್ಚಿನ ಅಭಿಮಾನಿಗಳು ಬೇಸರಗೊಂಡಿದ್ದರು. ಈ ಎರಡು ರಾಷ್ಟ್ರಗಳ ಪಂದ್ಯವನ್ನು ನೋಡಲು ಬರುವ ಅಭಿಮಾನಿಗಳು ವಿರಾಟ್ ಆಟವನ್ನು ನೋಡಲು ಇಚ್ಚಿಸುತ್ತಾರೆ. ಇದಕ್ಕೆ ಕಾರಣ ಈ ಹಿಂದಿನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಡೀ ತಂಡವೇ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಾಗ ವಿರಾಟ್ ಏಕಾಂಗಿ ಪ್ರದರ್ಶನ ನೀಡಿರುವ ಅನೇಕ ನಿದರ್ಶನಗಳಿವೆ. ಇದರಿಂದಾಗಿ ವಿರಾಟ್ ಅಭಿಮಾನಿಗಳಿಗೆ ಪಾಕಿಸ್ತಾನ ಪಂದ್ಯ ಹೆಚ್ಚು ಅಚ್ಚುಮೆಚ್ಚಿನದ್ದು. ಕಳೆದ ವರ್ಷದ ಟಿ-20 ವಿಶ್ವಕಪ್ನಲ್ಲಿ ಭಾತರ ಉತ್ತಮ ಪ್ರದರ್ಶನ ನೀಡದಿದ್ದರೂ, ಪಾಕಿಸ್ತಾನದ ವಿರುದ್ಧ ವಿರಾಟ್ 86 ರನ್ ಆಟದ ಮೂಲಕ ಗೆಲುವು ದಾಖಲಿಸಿತ್ತು.