ನವದೆಹಲಿ:ಪಾಕಿಸ್ತಾನಿ ಸೂಪರ್ ಲೀಗ್ನಲ್ಲಿ ಭಾನುವಾರ ಮುಲ್ತಾನ್-ಸುಲ್ತಾನ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವೆ ನಡೆದ ಪಂದ್ಯದಲ್ಲಿ ಮುಲ್ತಾನ್ ತಂಡ 9 ರನ್‌ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮುಲ್ತಾನ್‌ನ ಆರಂಭಿಕ ಆಟಗಾರ ಉಸ್ಮಾನ್ 43 ಎಸೆತಗಳಲ್ಲಿ 120 ರನ್ ಗಳಿಸಿದರು. ಉಸ್ಮಾನ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದರು. ಅವರ ಬಿರುಸಿನ ಬ್ಯಾಟಿಂಗ್ಗೆ ಮುಲ್ತಾನ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 262 ರನ್ ಗಳಿಸಿತು.
ಉಸ್ಮಾನ್ ಬ್ಯಾಟ್‌ನಿಂದ ಪಿಎಸ್‌ಎಲ್‌ನ ವೇಗದ ಶತಕ ದಾಖಲಾಯಿತು. ಉಸ್ಮಾನ್ ಕೇವಲ 36 ಎಸೆತಗಳಲ್ಲಿ ಶತಕ ದಾಖಲಿಸಿದರು. ಪಿಎಸ್‌ಎಲ್‌ನ 28ನೇ ಪಂದ್ಯ ಇತಿಹಾಸದಲ್ಲಿ ದಾಖಲಾಗಿದೆ. ಇತ್ತೀಚೆಗಷ್ಟೇ ಮಾಡಿದ ವೇಗದ ಶತಕದ ರಿಲೆ ರೊಸ್ಸೊ ಅವರ ದಾಖಲೆಯನ್ನು ಉಸ್ಮಾನ್ ಮುರಿದರು. ರಿಲೆ ಮಾರ್ಚ್ 10 ರಂದು ಪೇಶಾವರ್ ಝಲ್ಮಿ ವಿರುದ್ಧ 41 ಎಸೆತಗಳಲ್ಲಿ ಪಿಎಸ್ಎಲ್ನಲ್ಲಿ ವೇಗದ ಶತಕವನ್ನು ಗಳಿಸಿದ್ದರು.
41 ಎಸೆತದ ದಾಖಲೆಗೂ ಮುನ್ನ ರಿಲೆ 2020ರ ಪಿಎಸ್ಎಲ್ನಲ್ಲಿ 43 ಎಸೆತದಲ್ಲಿ ಶತಕ ಮಾಡಿ ದಾಖಲೆ ಮಾಡಿದ್ದರು. ಇದನ್ನು 2023 ರ ಪಿಎಸ್ಎಲ್ನಲ್ಲಿ ಅವರೇ 41 ಬಾಲ್ನಲ್ಲಿ ಶತಕಗಳಿಸಿ ತಮ್ಮ ದಾಖಲೆಯನ್ನು ಮುರಿದರು. ರಿಲೆ ಅವರ ದಾಖಲೆ ನಿನ್ನೆಯ ಪಂದ್ಯದಲ್ಲಿ ಉಸ್ಮಾನ್ ಮುರಿದಿದ್ದಾರೆ. ಮಾರ್ಚ್ 8, 2023 ರಂದು ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ರಾಯ್ ಈ ಸಾಧನೆ ಮಾಡಿದರು. ಜೇಸನ್ ಹೊರತುಪಡಿಸಿ, ಹ್ಯಾರಿ ಬ್ರೂಕ್ ಫೆಬ್ರವರಿ 19, 2022 ರಂದು ಲಾಹೋರ್‌ನಲ್ಲಿ 48 ಎಸೆತಗಳಲ್ಲಿ ವೇಗದ ಶತಕವನ್ನು ಗಳಿಸಿದ್ದರು.