ಮಸ್ಕಟ್ (ಓಮನ್) :ಅಮೆರಿಕ ಹಾಗೂ ಪಪುವಾ ನ್ಯೂ ಗಿನಿಯಾ ನಡುವೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ಮೂಲದ ಯುಎಸ್ಎ ಆಟಗಾರ ಜಸ್ಕರನ್ ಮಲ್ಹೋತ್ರಾ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
ಇವರ ವಿಶ್ವ ದಾಖಲೆಗೆ ಕ್ರಿಕೆಟ್ ಜಗತ್ತು ನಿಬ್ಬೆರಗು ಆಗಿದ್ದು, ಇವರ ಸಾಧನೆಗೆ ಅನೇಕರು ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಆದರೂ ಜಸ್ಕರನ್ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ರ ಫೋನ್ಗೋಸ್ಕರ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪಪುವಾ ನ್ಯೂ ಗಿನಿಯಾ ವಿರುದ್ಧ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದಿದ್ದ ಜಸ್ಕರನ್ 124 ಎಸೆತಗಳಲ್ಲಿ 16 ಸಿಕ್ಸರ್, 4 ಬೌಂಡರಿ ಸೇರಿ ಅಜೇಯ 173 ರನ್ ಬಾರಿಸಿದ್ದರು. ವಿಶೇಷವೆಂದರೆ ಫೋರ್-ಸಿಕ್ಸರ್ಗಳ ಮೂಲಕ 112 ರನ್ಗಳಿಕೆ ಮಾಡಿದ್ದರು. ಇವರ ಸಾಧನೆಗೆ ಅನೇಕರು ಫೋನ್ ಮಾಡಿ ಶ್ಲಾಘಿಸಿದ್ದಾರೆ.
ಯುವಿ ಫೋನ್ ಕರೆಗೆ ಕಾಯುತ್ತಿರುವ ಕ್ರಿಕೆಟರ್ : ಈಗಾಗಲೇ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟಿ-20 ಕ್ರಿಕೆಟ್ ಪಂದ್ಯದ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿರುವ ಯುವಿ ದೂರವಾಣಿ ಕರೆಗೋಸ್ಕರ ಜಸ್ಕರನ್ ಕಾತುರದಿಂದ ಕಾಯುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ನನಗೆ ಗೊತ್ತಿದೆ ಯುವಿ ಪಾಜಿ(yuvi paaji) ಆದಷ್ಟು ಬೇಗ ಫೋನ್ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಅವರ ಫೋನ್ ಕಾಲ್ಗೋಸ್ಕರ ನಾನು ಕಾಯುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿರಿ: ಅಮೆರಿಕ ತಂಡದ ಪರ ಆರು ಬಾಲ್ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದ ಭಾರತ ಮೂಲದ ಜಸ್ಕರನ್
ಜೊತೆಗೆ ಈ ಪಂದ್ಯದಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸುವ ಯಾವುದೇ ಯೋಜನೆ ನನಗೆ ಇರಲಿಲ್ಲ. ಕೊನೆ ಓವರ್ವರೆಗೆ ಬ್ಯಾಟ್ ಮಾಡಬೇಕು ಎಂಬ ಯೋಜನೆ ಇತ್ತು. ಅದೇ ರೀತಿ ಕೊನೆ ಓವರ್ವರೆಗೆ ಮೈದಾನದಲ್ಲಿ ಇದ್ದ ಕಾರಣ, 49ನೇ ಓವರ್ನ ಎಲ್ಲ ಎಸೆತ ಸಿಕ್ಸರ್ಗೆ ಹೊಡೆದಿರುವೆ ಎಂದರು. 2007ರ ವಿಶ್ವಕಪ್ ಕ್ರಿಕೆಟ್ನಲ್ಲಿ ನೆದರ್ಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಗಿಬ್ಸ್ ಎಲ್ಲ ಎಸೆತ ಸಿಕ್ಸರ್ ಬಾರಿಸಿರುವ ಸಾಧನೆ ಮಾಡಿದ್ದಾರೆ.