ಕರ್ನಾಟಕ

karnataka

ETV Bharat / sports

ಭಾರತಕ್ಕೆ ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಉನ್ಮುಕ್ತ್​​ ಚಾಂದ್ ಕ್ರಿಕೆಟ್​ಗೆ ನಿವೃತ್ತಿ - ಭಾರತೀಯ ಕ್ರಿಕೆಟ್​ಗೆ ಚಾಂದ್ ನಿವೃತ್ತಿ

ಭಾರತಕ್ಕೆ ಅಂಡರ್​-19 ವಿಶ್ವಕಪ್​ ಗೆಲ್ಲಿಸಿಕೊಟ್ಟಿರುವ ನಾಯಕ ಉನ್ಮುಕ್ತ್​ ಚಾಂದ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದು, ಇದೀಗ ಅಮೆರಿಕಕ್ಕೆ ತೆರಳುವ ಸಾಧ್ಯತೆ ಇದೆ.

Unmukt Chand
Unmukt Chand

By

Published : Aug 13, 2021, 6:16 PM IST

ನವದೆಹಲಿ: 2012ರಲ್ಲಿ ಅಂಡರ್​​-19 ಭಾರತ ತಂಡದ ಕ್ಯಾಪ್ಟನ್​ ಆಗಿ ವಿಶ್ವಕಪ್​ ಗೆದ್ದುಕೊಟ್ಟಿರುವ ನಾಯಕ ಉನ್ಮುಕ್ತ್​ ಚಾಂದ್​​ ಭಾರತೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಅಂಡರ್​-19 ಫೈನಲ್ ಪಂದ್ಯದಲ್ಲಿ ಚಾಂದ್​ ಅಜೇಯ 111ರನ್​ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ, ಟೀಂ ಇಂಡಿಯಾದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದರು. ಹೀಗಾಗಿ ನಿವೃತ್ತಿ ಘೋಷಣೆ ಮಾಡಿರುವ ಅವರು ಇದೀಗ ಅಮೆರಿಕದಲ್ಲಿ ಕ್ರಿಕೆಟ್ ಆಡುವ ಸಾಧ್ಯತೆ ದಟ್ಟವಾಗಿದೆ.

ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಉನ್ಮುಕ್ತ್​ ಚಾಂದ್​

ಚಾಂದ್​​ 67 ಪ್ರಥಮ ದರ್ಜೆ ಕ್ರಿಕೆಟ್​ನಿಂದ 3,379ರನ್​ಗಳಿಕೆ ಮಾಡಿದ್ದು, ಎಂಟು ಶತಕ ಮತ್ತು 16 ಅರ್ಧಶತಕ ಗಳಿಸಿದರು. ಟಿ-20 ಕ್ರಿಕೆಟ್​ನಲ್ಲಿ 1,565ರನ್​​ಗಳಿಸಿದ್ದಾರೆ. ಕೇವಲ 18 ವರ್ಷದವರಿದ್ದಾಗಲೇ ಐಪಿಎಲ್​ಗೆ ಲಗ್ಗೆ ಹಾಕಿದ್ದ ಚಾಂದ್​, ಡೆಲ್ಲಿ ಡೇರ್​ ಡೆವಿಲ್ಸ್​, ಮುಂಬೈ ಇಂಡಿಯನ್ಸ್​​ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ದಾರೆ. 2013ರಲ್ಲಿ ನ್ಯೂಜಿಲ್ಯಾಂಡ್ ಹಾಗೂ 2015ರಲ್ಲಿ ಬಾಂಗ್ಲಾ ಪ್ರವಾಸ ಕೈಗೊಂಡಿದ್ದ ಭಾರತದ ಎ ತಂಡದಲ್ಲೂ ಚಾಂದ್​ ಇದ್ದರು.

ಅಮೆರಿಕದಲ್ಲಿ ಕ್ರಿಕೆಟ್ ಆಡುವ ಚಾಂದ್​​

28 ವರ್ಷದ ಉನ್ಮುಕ್ತ್​ ಚಾಂದ್​​ ನಿವೃತ್ತಿ ಘೋಷಣೆ ಮಾಡಿರುವ ಬೆನ್ನಲ್ಲೇ ಅಮೆರಿಕಕ್ಕೆ ಹೋಗಲು ತಯಾರಿ ನಡೆಸಿದ್ದು, ಅಲ್ಲಿನ ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಭಾರತದಲ್ಲಿ ಅವಕಾಶದ ಕೊರತೆಯಿಂದಾಗಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details