ಕರ್ನಾಟಕ

karnataka

ETV Bharat / sports

'University team vs School team': ಭಾರತ-ಲಂಕಾ ಮೊದಲ ಪಂದ್ಯದ ಬಗ್ಗೆ ಪಾಕ್​ ಮಾಜಿ ಕ್ರಿಕೆಟಿಗನ ವಿಶ್ಲೇಷಣೆ - ಪಾಕ್​ ಮಾಜಿ ಕ್ರಿಕೆಟರ್​ ರಮೀಝ್ ರಾಜಾ

ಶ್ರೀಲಂಕಾ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ರಮೀಝ್ ರಾಜಾ ಮಾತನಾಡಿದ್ದು, ಅದರ ಪ್ರದರ್ಶನ ಶಾಲಾ ತಂಡದ ರೀತಿಯಲ್ಲಿತ್ತು ಎಂದಿದ್ದಾರೆ.

Sri Lanka vs India
Sri Lanka vs India

By

Published : Jul 19, 2021, 9:02 PM IST

ಹೈದರಾಬಾದ್​: ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಕೊಲಂಬೋದ ಆರ್​.ಪ್ರೇಮದಾಸ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಂಕಾ ಮೇಲೆ ಎಲ್ಲ ವಿಭಾಗಗಳಲ್ಲೂ ಸವಾರಿ ಮಾಡಿದ ಶಿಖರ್ ಧವನ್​ ಪಡೆ, ಸುಲಭ ಗೆಲುವು ದಾಖಲಿಸಿತು. ಇದರ ಬಗ್ಗೆ ಮಾತನಾಡಿರುವ ರಮೀಝ್ ರಾಜಾ, ಭಾರತ-ಶ್ರೀಲಂಕಾ ತಂಡಗಳನ್ನು "University team vs School team" ಎಂದು ಹೋಲಿಸಿದ್ದಾರೆ.

ತವರು ನೆಲದಲ್ಲಿ ಶ್ರೀಲಂಕಾ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಟೀಂ ಇಂಡಿಯಾ ಸ್ಪಿನ್ನರ್‌ಗಳ​ ವಿರುದ್ಧ ಇಷ್ಟೊಂದು ಕಳಪೆ ಪ್ರದರ್ಶನ ನೀಡಿದ್ದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ವಿಶ್ವವಿದ್ಯಾಲಯ ಹಾಗೂ ಶಾಲಾ ಹಂತದ ತಂಡಗಳ ನಡುವಿನ ಭಿನ್ನಾಭಿಪ್ರಾಯ ಇಲ್ಲಿ ಕಂಡು ಬಂದಿದ್ದು, ಭಾರತದ ಪ್ರದರ್ಶನ ಶ್ಲಾಘನೀಯ ಎಂದರು.

ಇದನ್ನೂ ಓದಿ: ಮೇಕೆದಾಟು ಬಗ್ಗೆ ಕೇಂದ್ರದಿಂದ ಭರವಸೆ ಸಿಕ್ಕಿದೆ, ಕರ್ನಾಟಕ ಜೊತೆಗಿನ ಮಾತುಕತೆಗೆ ಮಹತ್ವವಿಲ್ಲ: ಸ್ಟಾಲಿನ್​

ಮೊದಲು ಬ್ಯಾಟಿಂಗ್​ ನಡೆಸಿದ್ದ ಲಂಕಾ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 262 ರನ್​ಗಳಿಕೆ ಮಾಡಿತ್ತು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಕೇವಲ 36.4 ಓವರ್​ಗಳಲ್ಲಿ ಮೂರೇ ವಿಕೆಟ್​ ಕಳೆದುಕೊಂಡು ಮ್ಯಾಚ್ ಗೆದ್ದಿತ್ತು. ತಂಡದ ಪರ ಪೃಥ್ವಿ ಶಾ (43ರನ್​), ಶಿಖರ್​ ಧವನ್ ​​(86ರನ್​ ಅಜೇಯ), ಇಶಾನ್ ಕಿಶನ್ ​(59), ಪಾಂಡೆ (26) ಹಾಗೂ ಸೂರ್ಯಕುಮಾರ್​ ಯಾದವ್​ (31ಅಜೇಯ) ರನ್​ಗಳಿಕೆ ಮಾಡಿ ತಂಡದ ಗೆಲುವಿನ ರೂವಾರಿಗಳಾದರು.

ABOUT THE AUTHOR

...view details