ವೇಗ, ಆವೇಗ, ನಿಖರತೆ.. ಇದು ಭಾರತದ ಯುವ ವೇಗಿ ಉಮ್ರಾನ್ ಮಲಿಕ್ ಅವರ ಬೌಲಿಂಗ್‌ನಲ್ಲಿ ಕಂಡುಬಂದ ಸಂಗತಿಗಳು. ಇದಕ್ಕೆ ಇಂದಿನ ಭಾರತ-ಬಾಂಗ್ಲಾದೇಶ ನಡುವಣ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ಸಾಕ್ಷಿಯಾಯಿತು. 151 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಎಸೆತ ಎದುರಾಳಿಯನ್ನು ತರಗಲೆಯಂತೆ ಧೂಳೀಪಟ ಮಾಡಿದರು. ಈ ದೃಶ್ಯ ನೋಡಿ.
ಉಮ್ರಾನ್ ಅವರ ಬಿರುಗಾಳಿಯ ಬೌಲಿಂಗ್‌ಗೆ ನಜ್ಮುಲ್ ಹೊಸೈನ್ ಶಾಂಟೊ ವಿಕೆಟ್ ಉರುಳಿತು. ಇದು ಉಮ್ರಾನ್ ಎರಡನೇ ಓವರ್ನ ಮೊದಲ ಎಸೆತವಾಗಿತ್ತು. ಕ್ರೀಸ್ ಕಚ್ಚಿ ಆಡಲು ಮುಂದಾಗಿದ್ದ ಮತ್ತು ಉತ್ತಮ ಲಯದಲ್ಲಿರುವ ನಜ್ಮುಲ್ ಅವರನ್ನು ಭಾರತದ ವೇಗಿ ಕರಾರುವಾಕ್ ದಾಳಿ ಪೆವಿಲಿಯನ್ ಸೇರಿಸಿದರು.