ಕರ್ನಾಟಕ

karnataka

ETV Bharat / sports

ಹರಿಣಗಳ ವಿರುದ್ಧದ ಸರಣಿಯಲ್ಲಿ ಉಮ್ರಾನ್​ ಆಡುವುದು ಅನುಮಾನ.. ಕೋಚ್​ ದ್ರಾವಿಡ್ ಹೇಳಿದ್ದೇನು? - UMRAN MALIK South africa series

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಜಮ್ಮುವಿನ ವೇಗದ ಬೌಲರ್​​ ಉಮ್ರಾನ್ ಮಲಿಕ್​, ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ.

Rahul Dravid on UMRAN MALIK
Rahul Dravid on UMRAN MALIK

By

Published : Jun 8, 2022, 9:34 AM IST

ನವದೆಹಲಿ:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಟಿ -20 ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಕ್ಯಾಪ್ಟನ್ ಕೆಎಲ್​ ರಾಹುಲ್ ನೇತೃತ್ವದಲ್ಲಿ ಭಾರತ ತಂಡ ಅಭ್ಯಾಸದಲ್ಲಿ ನಿರತವಾಗಿದೆ. ತಂಡಕ್ಕೆ ಕೋಚ್​ ರಾಹುಲ್​ ದ್ರಾವಿಡ್​ ತರಬೇತಿ ನೀಡ್ತಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳಿಗೆ ಈ ಸಲ ಮಣೆ ಹಾಕಿರುವ ಕಾರಣ, ನಾಳಿನ ಪಂದ್ಯಕ್ಕಾಗಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬ ಕುತೂಹಲ ಮೂಡಿದೆ. ಐಪಿಎಲ್​​ನಲ್ಲಿ ಹಲ್​ಚಲ್​ ಎಬ್ಬಿಸಿದ ವೇಗದ ಬೌಲರ್​ ಉಮ್ರಾನ್ ಮಲಿಕ್​ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದು ಸ್ವಲ್ಪ ಕಷ್ಟ ಎನ್ನಲಾಗ್ತಿದೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಟೀಂ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್ ಮಾತನಾಡಿದ್ದು, ಉಮ್ರಾನ್​ ಮಲಿಕ್​ ಅವರ ಸರದಿ ಬರುವವರೆಗೂ ಕಾಯಬೇಕು ಎಂಬ ಮಾತು ಹೇಳಿದ್ದಾರೆ. ನೆಟ್​​ನಲ್ಲಿ ಉಮ್ರಾನ್ ಮಲಿಕ್​ ಬೌಲಿಂಗ್ ಶೈಲಿಗೆ ಕೋಚ್​ ದ್ರಾವಿಡ್​ ಫಿದಾ ಆಗಿರುವ ಕೋಚ್​, ಅವರ ಬೌಲಿಂಗ್​ ಶೈಲಿ ಉತ್ತಮವಾಗಿದ್ದು, ಖಂಡಿತವಾಗಿ ಮೂರು ಮಾದರಿ ಕ್ರಿಕೆಟ್​​ನಲ್ಲಿ ಅಂತಹ ಬೌಲರ್​ ಬೇಕು. ಆದರೆ, ತಂಡದಲ್ಲಿ ಕೆಲ ಹಿರಿಯ ಬೌಲರ್​ಗಳಿರುವ ಕಾರಣ ಉಮ್ರಾನ್ ಮಲಿಕ್ ಸರದಿ ಬರುವವರೆಗೂ ಕಾಯಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ಸ್ಪೀಡ್ ಸೆ ಕುಚ್ ನಹೀ ಹೋತಾ'.. ಉಮ್ರಾನ್ ಮಲಿಕ್​ ಬೌಲಿಂಗ್​​ ಬಗ್ಗೆ ಪಾಕ್​ ವೇಗಿ ಹೀಗೆ ಹೇಳಿದ್ಯಾಕೆ?

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೋಸ್ಕರ ಅರ್ಷದೀಪ್ ಸಹ ಆಯ್ಕೆಯಾಗಿರುವ ಕಾರಣ, ಉತ್ತಮ ಯಾರ್ಕರ್​​ ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ಚಾನ್ಸ್​ ಸಿಗುವ ಸಾಧ್ಯತೆ ಇದೆ. ಉಳಿದಂತೆ ತಂಡದಲ್ಲಿ ಹರ್ಷಲ್ ಪಟೇಲ್​, ಭುವನೇಶ್ವರ್ ಕುಮಾರ್​, ಆವೇಶ್ ಖಾನ್​ ಹಾಗೂ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯರಂತಹ ಬೌಲರ್​ಗಳು ಇರುವ ಕಾರಣ,ತಂಡದಲ್ಲಿ ಉಮ್ರನ್ ಮಲಿಕ್​ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ.

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡದ ಪರ ಆಡಿರುವ ಉಮ್ರಾನ್ ಮಲಿಕ್ 22 ವಿಕೆಟ್ ಪಡೆದು, ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಪ್ರತಿ ಗಂಟೆಗೆ 157 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ಐಪಿಎಲ್​​ನಲ್ಲಿ ಶರವೇಗದ ಬೌಲಿಂಗ್ ಮಾಡುವ​ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.

ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಜೂನ್ 12ರಂದು ಕಟಕ್​, ಜೂನ್ 14 ವಿಶಾಖಪಟ್ಟಣಂ, ಜೂನ್​ 17 ರಾಜ್​ಕೋಟ್​ ಹಾಗೂ ಜೂನ್​ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಎರಡು ತಿಂಗಳ ಕಾಲ ಸುದೀರ್ಘ ಐಪಿಎಲ್​​ನಲ್ಲಿ ಭಾಗಿಯಾಗಿರುವ ಕಾರಣ ಟೀಂ ಇಂಡಿಯಾ ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕ ಹಿರಿಯರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ, ತಂಡವನ್ನ ಕೆಎಲ್ ರಾಹುಲ್​ ಮುನ್ನಡೆಸಲಿದ್ದಾರೆ.

ABOUT THE AUTHOR

...view details