ಮುಂಬೈ: ಐಪಿಎಲ್ನ ಆಕರ್ಷಣೆಯಾಗಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಬೌಲರ್ ವಿಶೇಷ ಸಾಧನೆಯ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಷ್ಟು ದಿನ ತಮ್ಮ ವೇಗದ ಬೌಲಿಂಗ್ನಿಂದ ಗಮನ ಸೆಳೆದಿದ್ದ ಯುವ ಬೌಲರ್, ಇಂದು 20ನೇ ಓವರ್ ಅನ್ನು ಮೇಡನ್ ಮಾಡಿ ವಿಶೇಷ ದಾಖಲೆ ಬರೆದರು.
ಭಾನುವಾರ ಮುಂಬೈ ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಕೇವಲ 151 ರನ್ಗಳಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಅಲೌಟ್ ಮಾಡಿತು. ಈ ಪಂದ್ಯದಲ್ಲಿ ಅನುಭವಿ ಭುವನೇಶ್ವರ್ 3 ವಿಕೆಟ್ ಪಡೆದರೆ, ಯುವ ವೇಗಿ ಉಮ್ರಾನ್ 28ರನ್ ನೀಡಿ 4 ವಿಕೆಟ್ ಪಡೆದರು.
ವಿಶೇಷವೆಂದರೆ, ಕೊನೆ ಓವರ್ನಲ್ಲಿ ಉಮ್ರಾನ್ ಒಂದೂ ರನ್ ನೀಡದೆ ಪಂಜಾಬ್ ತಂಡದ ನಾಲ್ವರು ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದರು. 2ನೇ ಎಸೆತದಲ್ಲಿ ಒಡಿಯನ್ ಸ್ಮಿತ್ ವಿಕೆಟ್ ಪಡೆದ ಮಲಿಕ್ 4 ಮತ್ತು 5ನೇ ಎಸೆತದಲ್ಲಿ ರಾಹುಲ್ ಚಾಹರ್ ಮತ್ತು ವೈಭವ್ ಅರೋರರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮ ಎಸೆತದಲ್ಲಿ ಅರ್ಶ್ದೀಪ್ ಸಿಂಗ್ ರನ್ಔಟ್ ಆದರು.