ಕರ್ನಾಟಕ

karnataka

ETV Bharat / sports

ಕೊಹ್ಲಿ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಆಯ್ಕೆಸಮಿತಿ ಅಧ್ಯಕ್ಷ ಚೇತನ್ ಶರ್ಮಾ - ವಿರಾಟ್ ಕೊಹ್ಲಿ ನಾಯಕತ್ವ

ಅವರಿಬ್ಬರ ಭವಿಷ್ಯದ ಬಗ್ಗೆ ಉತ್ತಮ ಯೋಜನೆ ಇದೆ ಎಂದು ನಾನು ನಿಮಗೆ ಸ್ಪಷ್ಟಪಡುತ್ತೇನೆ. ಎಲ್ಲಾ ವಿಷಯಗಳು ಅದ್ಭುತವಾಗಿವೆ. ನೀವು ನನ್ನ ಸ್ಥಾನದಲ್ಲಿದ್ದರೆ, ಅವರಿಬ್ಬರು ತಂಡವಾಗಿ ಮತ್ತು ಕುಟುಂಬವಾಗಿ ಮತ್ತು ಘಟಕವಾಗಿ ಹೇಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ವೀಕ್ಷಿಸಿ ಆನಂದ ಪಡುತ್ತೀರಿ..

Virat Kohli and Rohit Sharma
ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ

By

Published : Jan 1, 2022, 3:19 PM IST

ನವದೆಹಲಿ :ಭಾರತ ತಂಡದ ನಾಯಕರುಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್​ ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ಅಲ್ಲಗೆಳೆದಿರುವ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ, ಭಾರತೀಯ ಸ್ಟಾರ್​ ಕ್ರಿಕೆಟಿಗರ ನಡುವೆ ಒಳ್ಳೆಯ ಬಾಂಧವ್ಯವಿದೆ ಎಂದು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಆ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ನೇಮಿಸಿದ ನಂತರ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಘೋಷಿಸಿದ ನಂತರ ವರ್ಚುವಲ್​ ಗೋಷ್ಠಿಯಲ್ಲಿ ಮಾತನಾಡಿದ ಚೇತನ್ ಶರ್ಮಾ, ಗೊಂದಲಗಳಿಗೆ ತೆರ ಎಳೆಯಲು ಪ್ರಯತ್ನಿಸಿದ್ದಾರೆ.

"ಅವರಿಬ್ಬರ ನಡುವಿನ ವಿಷಯಗಳು ಉತ್ತಮವಾಗಿವೆ. ಹಾಗಾಗಿ, ನೀವು ಊಹಾಪೋಹಗಳೊಂದಿಗೆ ಹೋಗುವುದನ್ನ ಬಿಡಿ ಎಂದು ನಾನು ಹೇಳುತ್ತಿದ್ದೇನೆ, ಆಯ್ಕೆಗಾರರಾಗುವ ಮುನ್ನ ನಾವೂ ಕೂಡ ಕ್ರಿಕೆಟಿಗರು. ಅವರಿಬ್ಬರ ನಡುವೆ ಯಾವುದೇ ಒಡಕುಗಳಿಲ್ಲ. ಕೆಲವೊಮ್ಮೆ ಅವರಿಬ್ಬರ ಕುರಿತಂತೆ ಬರುವ ವರದಿಗಳನ್ನು ಓದಿದಾಗ ನಗು ಬರುತ್ತದೆ ಎಂದಿದ್ದಾರೆ.

ಅವರಿಬ್ಬರ ಭವಿಷ್ಯದ ಬಗ್ಗೆ ಉತ್ತಮ ಯೋಜನೆ ಇದೆ ಎಂದು ನಾನು ನಿಮಗೆ ಸ್ಪಷ್ಟಪಡುತ್ತೇನೆ. ಎಲ್ಲಾ ವಿಷಯಗಳು ಅದ್ಭುತವಾಗಿವೆ. ನೀವು ನನ್ನ ಸ್ಥಾನದಲ್ಲಿದ್ದರೆ, ಅವರಿಬ್ಬರು ತಂಡವಾಗಿ ಮತ್ತು ಕುಟುಂಬವಾಗಿ ಮತ್ತು ಘಟಕವಾಗಿ ಹೇಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ವೀಕ್ಷಿಸಿ ಆನಂದ ಪಡುತ್ತೀರಿ ಎಂದು ತಿಳಿಸಿದ್ದಾರೆ.

ಆದರೆ, ಅವರಿಬ್ಬರ ನಡುವೆ ಸರಿಯಿಲ್ಲ ಎಂದು ಜನರು ಬಿಂಬಿಸುತ್ತಿರುವುದನ್ನು ಕೇಳಿದಾಗ ತುಂಬಾ ಬೇಸರವಾಗುತ್ತದೆ. ಆದ್ದರಿಂದ ಜನರು ಆ ವಿವಾದವನ್ನು 2021ಕ್ಕೆ ಬಿಟ್ಟು ಬಿಡಲಿ. ಅವರು ಅತ್ಯುತ್ತಮ ತಂಡವಾಗಲು ಅವರಿಬ್ಬರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎನ್ನುವುದರ ಬಗ್ಗೆ ಮಾತನಾಡಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ವರ್ಷದ ಟೆಸ್ಟ್​ ತಂಡ ಪ್ರಕಟಿಸಿದ ಕ್ರಿಕೆಟ್​ ಆಸ್ಟ್ರೇಲಿಯಾ ; ರೋಹಿತ್​ ಸೇರಿ ಭಾರತದ ನಾಲ್ವರ ಆಯ್ಕೆ, ಕೊಹ್ಲಿಗಿಲ್ಲ ಸ್ಥಾನ!

ABOUT THE AUTHOR

...view details