ಸಿಡ್ನಿ(ಆಸ್ಟ್ರೇಲಿಯಾ):ಮಳೆಯ ಅಡ್ಡಿಯ ನಡುವೆಯೂ ತನ್ನ ಬೌಲಿಂಗ್ ಶಕ್ತಿಯಿಂದ ಹರಿಣಗಳನ್ನು ಕಟ್ಟಿಹಾಕಿದ ಪಾಕಿಸ್ತಾನ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 33 ರನ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ಆಸೆ ಜೀವಂತವಾಗಿಟ್ಟುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಪಾಕ್ ಪಡೆ ಇಫ್ತಿಕಾರ್ ಅಹ್ಮದ್ ಮತ್ತು ಆಲ್ರೌಂಡರ್ ಶಾದಾಬ್ ನದೀಮ್ರ ಭರ್ಜರಿ ಪ್ರದರ್ಶನದಿಂದ 9 ವಿಕೆಟ್ಗೆ 185 ರನ್ ಗಳಿಸಿತು. ಗೆದ್ದು ಸೆಮಿಫೈನಲ್ ಖಚಿತಪಡಿಸಿಕೊಳ್ಳುವ ಆತುರದಲ್ಲಿದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೈಫಲ್ಯದಿಂದ ಡಕ್ವರ್ಥ್ ಲೂಯಿಸ್ ನಿಮಯದ ಪ್ರಕಾರ 14 ಓವರ್ಗಳಲ್ಲಿ 108 ರನ್ ಗಳಿಸಿ ಸೋಲು ಕಂಡಿತು.
ಮಳೆಗೆ ಕೊಚ್ಚಿ ಹೋದ ಹರಿಣಗಳು:8 ಓವರ್ಗಳಲ್ಲಿ 66 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಲ್ಲಿದ್ದ ದಕ್ಷಿಣ ಆಫ್ರಿಕಾ ಆಟಕ್ಕೆ ಮಳೆ ಅಡ್ಡಿಯಾಯಿತು. ಸಿಡ್ನಿ ಮೈದಾನ ಮಳೆಗೆ ತೊಯ್ದು ಒದ್ದೆಯಾಯಿತು. ಮಳೆ ನಿಂತ ಬಳಿಕ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 14 ಓವರ್ಗೆ ಆಟವನ್ನು ಕಡಿತಗೊಳಿಸಿ ಆಫ್ರಿಕಾಗೆ 142 ರನ್ಗಳ ಗುರಿ ನೀಡಲಾಯಿತು.
ಭಾರತ ವಿರುದ್ಧ ಸೋತು ತೀವ್ರ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತು. ನಿಖರ ದಾಳಿ ಮಾಡಿದ ಪಾಕ್ ಬೌಲಿಂಗ್ ಅಸ್ತ್ರ ಶಾಹೀನ್ ಶಾ ಆಫ್ರಿದಿ 3 ಪ್ರಮುಖ ವಿಕೆಟ್ ಕಿತ್ತರು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ಶಾದಾಬ್ ಖಾನ್ 2 ವಿಕೆಟ್ ಪಡೆದರು.