ದುಬೈ: ಐಸಿಸಿ ಟಿ20 ವಿಶ್ವಕಪ್ನಲ್ಲಿ ಗುರುವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತವಾಗಿದೆ. ತರಬೇತಿ ವೇಳೆ ಸ್ಟಾರ್ ಪೇಸರ್ ಮಿಚೆಲ್ ಸ್ಟಾರ್ಕ್ ಗಾಯಗೊಂಡಿದ್ದಾರೆ. ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾದ ಮ್ಯಾನೇಜ್ಮೆಂಟ್ ಸ್ಟಾರ್ಕ್ ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿದುಬಂದಿದೆ.
ವಿಶ್ವದ ಟಾಪ್ ಬೌಲರ್ಗಳಲ್ಲಿ ಒಬ್ಬರಾಗಿರುವ ಸ್ಟಾರ್ಕ್ ಬುಧವಾರ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುವ ವೇಳೆ ಕುಂಟುತ್ತಿರುವುದು ಮತ್ತು ನೋವಿನಿಂದ ನರಳಾಡುತ್ತಿರುವುದು ಕಂಡುಬಂದಿತ್ತು. ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ವೇಳೆ ಎಡಗೈ ವೇಗಿಯ ಬಲ ಮೊಣಕಾಲಿಗೆ ಪೆಟ್ಟುಬಿದ್ದಿರುವುದು ಅವರನ್ನು ಸಮಸ್ಯೆಗೀಡು ಮಾಡಿರಬಹುದು ಎನ್ನಲಾಗುತ್ತಿದೆ.