ದುಬೈ:ಐಸಿಸಿ ಟಿ-20 ವಿಶ್ವಕಪ್ನ ಸೂಪರ್-12 ಹಂತದ ಗ್ರೂಪ್ 1ರಲ್ಲಿ ಇಂದು ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಆಡಿರುವ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಕೇವಲ 55ರನ್ಗಳಿಗೆ ಸರ್ವಪತನಗೊಂಡು ಸೋಲು ಅನುಭವಿಸಿದ್ದರೆ, ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ಗಳ ಸೋಲು ಕಂಡಿದೆ.
ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಆಟಗಾರರಿದ್ದು, ಯಾವುದೇ ಸಂದರ್ಭದಲ್ಲೂ ಎದುರಾಳಿ ತಂಡದ ವಿರುದ್ಧ ತಿರುಗಿಬೀಳುವ ಸಾಮರ್ಥ್ಯ ಹೊಂದಿದೆ. ಆಫ್ರಿಕಾ ತಂಡ ಕೂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸಮಬಲ ಹೊಂದಿದ್ದು, ಹಿಂದಿನ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ.
ಇದನ್ನೂ ಓದಿರಿ:ವಿಶ್ವಕಪ್ನಲ್ಲಿಂದು ಸೇಡಿನ ಪಂದ್ಯ: ಭದ್ರತೆ ನೆಪ ಹೇಳಿ ಅವಮಾನ ಮಾಡಿರುವ ನ್ಯೂಜಿಲ್ಯಾಂಡ್ ವಿರುದ್ಧ ಪಾಕ್ ಫೈಟ್
ಉಭಯ ತಂಡಗಳು ಇಲ್ಲಿಯವರೆಗೆ 15 ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಫ್ರಿಕಾ 9 ಪಂದ್ಯ ಹಾಗೂ ವೆಸ್ಟ್ ಇಂಡೀಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಟಿ-20 ವಿಶ್ವಕಪ್ನಲ್ಲಿ ಮೂರು ಪಂದ್ಯಗಳಲ್ಲಿ ಎರಡು ತಂಡ ಕಣಕ್ಕಿಳಿದಿದ್ದು, ಎರಡಲ್ಲಿ ಆಫ್ರಿಕಾ ಹಾಗೂ ಒಂದು ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದಿದೆ.
ಸಂಭವನೀಯ ಆಟಗಾರರು
ದಕ್ಷಿಣ ಆಫ್ರಿಕಾ:ಕ್ವಿಂಟನ್ ಡಿಕಾಕ್(ವಿ.ಕೀ), ಬುವಂ(ಕ್ಯಾಪ್ಟನ್), ದುಸ್ಸೆನ್, ಮಾರ್ಕ್ರಾಮ್, ಡೆವಿಡ್ ಮಿಲ್ಲರ್, ಹೆನ್ರಿಚ್ ಕ್ಲೆಸೆನ್,ಕೇಶವ್ ಮಹಾರಾಜ್,ಡ್ವೇನಿ ಪ್ರಿಟೋರಿಸ್, ಕಾಗಿಸೊ ರಬಾಡಾ, ಅನ್ರಿಚ್ ನೊರ್ಟ್ಜ್, ಶಮ್ಸಿ
ವೆಸ್ಟ್ ಇಂಡೀಸ್: ಸಿಮನ್ಸ್, ಲಿವಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮಾಯರ್, ಡ್ವೇನ್ ಬ್ರಾವೋ, ಪೂರನ್(ವಿ.ಕೀ), ಕಿರಣ್ ಪೊಲಾರ್ಡ್(ಕ್ಯಾಪ್ಟನ್),ಆಂಡ್ರೊ ರೆಸೆಲ್, ಹೊಸೆನ್, ರವಿ ರಾಂಪಾಲ್, ಒಬ್ಡಿ ಮ್ಯಾಕೊ