ಕರ್ನಾಟಕ

karnataka

ETV Bharat / sports

ಅತ್ಯಾಚಾರ ಆರೋಪ: ಆಸ್ಟ್ರೇಲಿಯಾದಲ್ಲಿ ಶ್ರೀಲಂಕಾ ಸ್ಟಾರ್ ಬ್ಯಾಟ್ಸ್‌ಮನ್ ಅರೆಸ್ಟ್ - ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್ ಧನುಷ್ಕ ಗುಣತಿಲಕ

ಅತ್ಯಾಚಾರ ಆರೋಪದಲ್ಲಿ ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್ ಧನುಷ್ಕ ಗುಣತಿಲಕ ಬಂಧನ.

Danushka Gunathilaka
ಧನುಷ್ಕಾ ಗುಣತಿಲಕ

By

Published : Nov 6, 2022, 9:21 AM IST

ಸಿಡ್ನಿ(ಆಸ್ಟ್ರೇಲಿಯಾ): ಅತ್ಯಾಚಾರದ ಆರೋಪದ ಮೇಲೆ ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್ ಧನುಷ್ಕ ಗುಣತಿಲಕ ಅವರನ್ನು ಇಂದು ಬೆಳಗ್ಗೆ ಸಿಡ್ನಿಯಲ್ಲಿ ಬಂಧಿಸಲಾಗಿದೆ. ಕಳೆದ ವಾರ ಸಿಡ್ನಿಯಲ್ಲಿ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಸುಮಾರು 1 ಗಂಟೆಗೆ ಧನುಷ್ಕ ಗುಣತಿಲಕ ಅವರನ್ನು ಹೋಟೆಲ್​ನಲ್ಲಿ ಬಂಧಿಸಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ ಟೂರ್ನಿಯಿಂದ ಶ್ರೀಲಂಕಾ ತಂಡ ಹೊರಬಿದ್ದಿದ್ದು, ತಂಡದ ಆಟಗಾರರು ತವರಿಗೆ ತೆರಳುತ್ತಿದ್ದಾರೆ. ಆದ್ರೆ ಇತ್ತ ಧನುಷ್ಕ ಬಂಧನವಾಗಿದೆ.

ರೋಸ್ ಬೇಯಲ್ಲಿರುವ ಮನೆಯಲ್ಲಿ ಲೈಂಗಿಕ ದೌರ್ಜನ್ಯವಾಗಿದೆ ಎಂದು 29 ವರ್ಷದ ಮಹಿಳೆ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆಯು ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಗುಣತಿಲಕ ಅವರೊಂದಿಗೆ ಹಲವಾರು ದಿನಗಳವರೆಗೆ ಮೇಸೆಜ್ ವಿನಿಮಯ ಮಾಡಿಕೊಂಡಿದ್ದಳು. ಇವರಿಬ್ಬರು ಬುಧವಾರ ಭೇಟಿಯಾಗಿದ್ದು, ಈ ವೇಳೆ ಮಹಿಳೆ ಮೇಲೆ ಗುಣತಿಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶನಿವಾರ ಅಪರಾಧ ನಡೆದ ಸ್ಥಳ ಪರಿಶೀಲಿಸಲಾಗಿದ್ದು, ಗುಣತಿಲಕ ಅವರನ್ನು ಸಿಡ್ನಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. 2015ರಲ್ಲಿ ಗುಣತಿಲಕ ಅವರು ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದು, ಶ್ರೀಲಂಕಾ ಪರ ಎಂಟು ಟೆಸ್ಟ್‌ಗಳು, 47 ಏಕದಿನ ಮತ್ತು 46 T20 ಪಂದ್ಯಗಳನ್ನಾಡಿದ್ದಾರೆ.

ಇದನ್ನೂ ಓದಿ:ಫೀಲ್ಡಿಂಗ್​ಗೆ ಅಡಚಣೆ: ವಿಚಿತ್ರವಾಗಿ ವಿಕೆಟ್​ ಒಪ್ಪಿಸಿದ ಶ್ರೀಲಂಕಾದ ಗುಣತಿಲಕ್​

ABOUT THE AUTHOR

...view details