ಕರ್ನಾಟಕ

karnataka

ETV Bharat / sports

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಸೌರಾಷ್ಟ್ರ ಮುನ್ನಡೆಸಲಿರುವ ಉನಾದ್ಕತ್​​​​​ - ವೇಗಿ ಜಯದೇವ್​ ಉನಾದ್ಕತ್​​

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಸ್‌ಸಿಎ) ಹಿರಿಯ ಕ್ರಿಕೆಟಿಗರ ಆಯ್ಕೆ ಸಮಿತಿಯು 20 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಜಯದೇವ್​ ಉನಾದ್ಕತ್​ ತಂಡದ ನಾಯಕತ್ವದ ಹೊಣೆ ಹೊರಲಿದ್ದಾರೆ ಎಂದು ತಿಳಿಸಿದೆ.

Unadkat to lead Saurashtra in Mushtaq Ali Trophy
ಸೌರಾಷ್ಟ್ರ ತಂಡದ ನಾಯಕ ಜಯದೇವ್​ ಉನಾದ್ಕತ್​​​​​

By

Published : Dec 25, 2020, 7:25 PM IST

ರಾಜ್​​ಕೋಟ್​: ಜನವರಿ 10ರಿಂದ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ವೇಗಿ ಜಯದೇವ್​ ಉನಾದ್ಕತ್​​ ಸೌರಾಷ್ಟ್ರ ತಂಡವನ್ನು ಮುನ್ನಡೆಸಲಿದ್ದಾರೆ.

ಜಯದೇವ್​ ಉನಾದ್ಕತ್​ ಅವರ ಮುಂದಾಳತ್ವದಲ್ಲೇ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಚಾಂಪಿಯನ್​ ಆಗಿ ದಾಖಲೆ ನಿರ್ಮಿಸಿತ್ತು. ಈ ತಂಡ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗುರಿ ಬೆನ್ನಟ್ಟಿ ಗೆದ್ದ ಸಾಧನೆ ಮಾಡಿತ್ತು.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಸ್‌ಸಿಎ) ಹಿರಿಯ ಕ್ರಿಕೆಟಿಗರ ಆಯ್ಕೆ ಸಮಿತಿ ಆನ್‌ಲೈನ್ ಸಭೆ ನಡೆಸಿದ ನಂತರ ಮಾಧ್ಯಮ ಪ್ರಕಟಣೆಯ ಮೂಲಕ 20 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಇದನ್ನೂ ಓದಿ...ಅಮೀರ್​ ನಿವೃತ್ತಿ ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ: ಇಂಜಮಾಮ್

ವಿದರ್ಭ, ಗೋವಾ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳೊಂದಿಗೆ ಸೌರಾಷ್ಟ್ರ ತಂಡವನ್ನು ಎಲೈಟ್ ಗ್ರೂಪ್ 'ಡಿ'ಯಲ್ಲಿ ಸೇರಿಸಲಾಗಿದೆ. ಇಂಧೋರ್‌ನಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ.

ಸೌರಾಷ್ಟ್ರ ತಂಡ:ಜಯದೇವ್ ಉನಾದ್ಕತ್ (ನಾಯಕ), ಚಿರಾಗ್ ಜಾನಿ, ಧರ್ಮೇಂದ್ರಸಿಂಹ ಜಡೇಜಾ, ಅವಿ ಬರೋತ್​​, ಹಾರ್ವಿಕ್ ದೇಸಾಯಿ, ಅರ್ಪಿತ್ ವಾಸವಾಡ, ಸಮರ್ತ್ ವ್ಯಾಸ್, ವಿಶ್ವರಾಜಸಿಂಹ ಜಡೇಜಾ, ಚೇತನ್ ಸಕರಿಯಾ, ಪ್ರೇರಕ್ ಮಂಕಡ್, ದಿವ್ಯಾರಾಜಸಿಹ್ನ, ವಂಡಿತ್​​ ಜೀವರಾಜ್​, ಪರ್ತ್​​​ ಭೂತ್​, ಅಗ್ನಿವೇಷ್​ ಆಯಾಚಿ, ಕುನಾಲ್​​​​​​ ಕರಮ್​ಚಾಂದನಿ, ಯುವರಾಜ್ ಚುಡಾಸಮಾ, ಹಿಮಾಲಯ ಬರಾಡ್, ಕುಶಾಂಗ್ ಪಟೇಲ್, ಪಾರ್ತ್ ಚೌಹಾಣ್​ ಮತ್ತು ದೇವಾಂಗ್ ಕರಮ್ತಾ.

ABOUT THE AUTHOR

...view details