ಕೊಲಂಬೊ: ಕೊಲಂಬೋದ ಆರ್ ಪ್ರೇಮ್ದಾಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ - ಶ್ರೀಲಂಕಾ ನಡುವೆ ಮೂರನೇ ಟಿ-20 ಪಂದ್ಯ ನಡೆದಿದೆ. ಈ ಆಟದಲ್ಲಿ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಾದ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಅಜೇಯ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಅಷ್ಟೇ ಅಲ್ಲದೆ, 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದಾರೆ.
ಟಿ - 20 ಕ್ರಿಕೆಟ್: ಶ್ರೀಲಂಕಾ ವಿರುದ್ಧ ದ.ಆಫ್ರಿಕಾಗೆ ಜಯ, ಸರಣಿ ಕೈವಶ - ಶ್ರೀಲಂಕಾ
ಕೊಲಂಬೋದಲ್ಲಿ ನಡೆದ ಮೂರನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಜಯಸಾಧಿಸಿದೆ. ಈ ಮೂಲಕ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ 8 ವಿಕೆಟ್ಗೆ 120 ರನ್ ಗಳಿಸಿತ್ತು. ಓಪನರ್ ಕುಸಾಲ್ ಪೆರೇರಾ 39 ರನ್ ಗಳಿಸಿ ಆತಿಥೇಯ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರೆ, ಚಾಮಿಕಾ ಕರುಣರತ್ನೆ ಅಜೇಯ 24ರನ್ ಗಳಿಸುವ ಮೂಲಕ ಶ್ರೀಲಂಕಾ ಸಾಧಾರಣ ಮೊತ್ತ ಗಳಿಸಲು ನೆರವಾದರು. ಇನ್ನು ಸ್ಪಿನ್ನರ್ ಜಾರ್ನ್ ಫೋರ್ಟುಯಿನ್ ಅತ್ಯುತ್ತಮ ಬೌಲಿಂಗ್ ಮಾಡಿ 21 ರನ್ಗೆ 2 ವಿಕೆಟ್ ಪಡೆದಿದ್ದರು. ಇನ್ನು ವೇಗಿ ಕಾಗಿಸೋ ರಬಾಡ 23 ರನ್ಗೆ ಶ್ರೀಲಂಕಾದ 2 ವಿಕೆಟ್ ಉರುಳಿಸಿದ್ದರು.
ಇನ್ನು ಶ್ರೀಲಂಕಾ ನೀಡಿದ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 32 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಈ ಮೂಲಕ ಮೂರನೇ ಟಿ-20 ಪಂದ್ಯದಲ್ಲಿ ಜಯ ಸಾಧಿಸುವುದರೊಂದಿಗೆ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.