ಕರ್ನಾಟಕ

karnataka

ETV Bharat / sports

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ : ಇಂಡಿಯಾ ಲೆಜೆಂಡ್ಸ್ ಚಾಂಪಿಯನ್​

ಆಲ್‌ರೌಂಡ್ ಪ್ರದರ್ಶನ ನೀಡಿದ ಇಂಡಿಯಾ ಲೆಜೆಂಡ್ಸ್‌ ತಂಡ, ಶ್ರೀಲಂಕಾ ಲೆಜೆಂಡ್ಸ್‌ ತಂಡವನ್ನು 14 ರನ್​ಗಳಿಂದ ಮಣಿಸುವ ಮೂಲಕ ರೋಡ್‌ ಸೇಫ್ಟಿ ವಿಶ್ವ ಸರಣಿ-2021 ಟೂರ್ನಿಯಲ್ಲಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ.

By

Published : Mar 22, 2021, 6:42 AM IST

Road Safety World Series Champions of India Legends team 2021
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್

ರಾಯಪುರ (ಛತ್ತೀಸ್​ಗಢ):ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ-20 ಕ್ರಿಕೆಟ್​ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ತಂಡ, ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 14 ರನ್​ಗಳಿಂದ ಮಣಿಸುವ ಮೂಲಕ ಪ್ರಶಸ್ತಿ ಎತ್ತಿಹಿಡಿದಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಡಿಯಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181ರನ್​ ಕಲೆಹಾಕಿತು. ಭಾರತದ ಪರ ಸಚಿನ್ 30 ರನ್ ಗಳಿಸಿದರೆ, ಯುವರಾಜ್ ಸಿಂಗ್ 60 ಮತ್ತು ಯೂಸುಫ್ ಪಠಾಣ್ ಅಜೇಯ 62 ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

ಭಾರತ ನೀಡಿದ 182 ರನ್ನುಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲು ಶಕ್ತವಾಯಿತು. ಲಂಕಾ ಪರ ಸನತ್ ಜಯಸೂರ್ಯ 43, ಚಿಂತಕ ಜಯಸಿಂಘೆ 40 ಮತ್ತು ವೀರರತ್ನೆ 38 ರನ್ ಗಳಿಸಿದರು. ಅಂತಿಮವಾಗಿ ಲಂಕಾ ತಂಡ 14 ರನ್ನುಗಳ ಅಂತರದಲ್ಲಿ ಭಾರತದ ಎದುರು ಸೋಲೊಪ್ಪಿಕೊಂಡಿತು. ಆ ಮೂಲಕ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ-20 2021 ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಓದಿ : ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಪುಣೆಗೆ ಆಗಮಿಸಿದ ಟೀಂ ಇಂಡಿಯಾ

ಸಂಕ್ಷಿಪ್ತ ಸ್ಕೋರ್‌:

ಇಂಡಿಯಾ ಲೆಜೆಂಡ್ಸ್‌: 20 ಓವರ್‌ಗಳಲ್ಲಿ 181/4 (ವೀರೇಂದ್ರ ಸೆಹ್ವಾಗ್ 10, ಸಚಿನ್ ತೆಂಡೂಲ್ಕರ್‌ 30, ಯುವರಾಜ್‌ ಸಿಂಗ್ 60, ಯೂಸುಫ್‌ ಪಠಾಣ್ 62, ರಂಗನ ಹೆರತ್‌ 1/11, ಸನತ್ ಜಯಸೂರ್ಯ 1/17, ಪರ್ವೇಝ್ ಮಹರೂಫ್ 1/16, ವೀರರತ್ನೆ 1/23).

ಶ್ರೀಲಂಕಾ ಲೆಜೆಂಡ್ಸ್‌: 20 ಓವರ್‌ಗಳಲ್ಲಿ 167/7 (ತಿಲಕರತ್ನೆ ದಿಲ್ಷಾನ್ 21, ಸನತ್ ಜಯಸೂರ್ಯ 43, ಚಿಂತಕ ಜಯಸಿಂಘೆ 40, ವೀರರತ್ನೆ 38, ಯೂಸುಫ್ ಪಠಾಣ್ 2/26, ಇರ್ಫಾನ್ ಪಠಾಣ್ 2/29, ಮನ್‌ಪ್ರೀತ್‌ ಗೂನಿ).

ABOUT THE AUTHOR

...view details