ದುಬೈ: ಆರ್‌ಸಿಬಿ ವಿರುದ್ಧ ಏಳು ವಿಕೆಟ್‌ಗಳ ಪತನದ ನಂತರ, ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ತಂಡವು ಉಳಿದ ಐದೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ನಾವು ಪ್ಲೇ - ಆಫ್ ತಲುಪಲು ನಮ್ಮ ಕೊನೆಯ ಐದು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ನಾವು ಗೆಲುವಿಗಾಗಿ ಬಹಳಷ್ಟು ಶ್ರಮವಹಿಸಿದ್ದೇವೆ. ಇನ್ನು ಮುಂದೆಯೂ ನಮ್ಮ ಶ್ರಮ ಹೀಗೆ ಮುಂದುವರೆಯಲಿದೆ. ಕಷ್ಟದ ಸಂದರ್ಭಗಳಲ್ಲಿ ನಮ್ಮನ್ನು ನಾವು ಬೆಂಬಲಿಸುತ್ತೇವೆ ಎಂದು ತಂಡದ ಇತರ ಆಟಗಾರರಲ್ಲಿ ಹುಮ್ಮಸ್ಸು ತುಂಬಿದ್ದಾರೆ.
ಆರಂಭಿಕ 22 ಎಸೆತಗಳಲ್ಲಿ 41 ರನ್ ಗಳಿಸಿದ ರಾಬಿನ್ ಉತ್ತಪ್ಪ ಅವರನ್ನು ಕಳುಹಿಸುವ ಹಿಂದಿನ ಕಾರಣದ ಬಗ್ಗೆ ಪ್ರತಿಕ್ರಿಯಿಸಿ, ಜೋಸ್ ಅದ್ಬುತ ಆರಂಭಿಕ ಆಟಗಾರ, ಆದರೆ ಆತನೊಂದಿಗೆ ಮಧ್ಯಮ ಕ್ರಮಾಂಕದ ಅನುಭವ ಬೇಕಿತ್ತು. ಆದ್ದರಿಂದ ರಾಬಿನ್ ಅವರನ್ನು ಕಳುಹಿಸಲಾಯಿತು. ತಂಡಕ್ಕೆ ಹೆಚ್ಚಿನ ಸಮತೋಲನವನ್ನು ನೀಡಿ ರಾಬಿನ್ ಸಾಕಷ್ಟು ಆರಂಭಿಕ ಪಂದ್ಯಗಳನ್ನು ಆಡಿದ್ದಾರೆ. ಮುಂದೆಯೂ ಉತ್ತಮವಾಗಿ ಆಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್ಆರ್ ವಿರುದ್ಧ 22 ಎಸೆತಗಳಲ್ಲಿ 55 ರನ್ ಗಳಿಸಿದ ಎಬಿ ಡಿವಿಲಿಯರ್ಸ್ ಸ್ಟೀವ್ ಸ್ಮಿತ್ 36 ಎಸೆತಗಳಲ್ಲಿ 57 ರನ್ ಗಳಿಸುವ ಮೂಲಕ ತಂಡ 20 ಓವರ್‌ಗಳಲ್ಲಿ177 ರನ್ ಮುಟ್ಟಲು ನೆರವಾದರು. ಕ್ರಿಸ್ ಮೋರಿಸ್ 4 ಓವರ್‌ಗಳಲ್ಲಿ 24 ರನ್ಗಳನ್ನು ನೀಡುವ ಮೂಲಕ ಪಂದ್ಯದಲ್ಲಿ ಉತ್ತಮ ಬೌಲರ್ ಎನಿಸಿಕೊಂಡರು. ಎಬಿ ಡಿವಿಲಿಯರ್ಸ್ 22 ಎಸೆತಗಳಲ್ಲಿ 55 ರನ್ ಗಳಿಸಿ ಆರ್‌ಸಿಬಿಯನ್ನು ಗೆಲ್ಲುವಂತೆ ಮಾಡಿದರು.