ಲಂಡನ್ (ಯುಕೆ): ಭಾರತದ ಕ್ರಿಕೆಟ್ ತಾರೆಯರಾದ ಹರ್ಮನ್‌ಪ್ರೀತ್ ಕೌರ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಪ್ರತಿಷ್ಠಿತ ವಿಸ್ಡನ್ ಪ್ರಶಸ್ತಿ ಸಂದಿದೆ. ಹರ್ಮನ್‌ಪ್ರೀತ್ ಕೌರ್ ಅವರಿಗೆ ವರ್ಷದ ಕ್ರಿಕೆಟ್ ಆಟಗಾರ್ತಿ ಗೌರವ ನೀಡಿದರೆ, ವಿಶ್ವದ ಪ್ರಮುಖ ಟಿ20 ಕ್ರಿಕೆಟಿಗ ಗೌರವ ಸೂರ್ಯಕುಮಾರ್ ಯಾದವ್ಗೆ ಸಿಕ್ಕಿದೆ. ಹರ್ಮನ್‌ಪ್ರೀತ್ ಕೌರ್ ವರ್ಷದ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
ಕೌರ್ 2023 ರ ವಿಸ್ಡನ್ ಕ್ರಿಕೆಟರ್ಸ್‌ನಲ್ಲಿ ಘೋಷಿಸಲಾದ ವರ್ಷದ ಐವರು ಕ್ರಿಕೆಟಿಗರಲ್ಲಿ ಒಬ್ಬರು. 2022 ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಂಗ್ಲಿಷರ ನೆಲದಲ್ಲಿ 3-0ಯಿಂದ ಏಕದಿನ ಸರಣಿ ಗೆದ್ದುಕೊಂಡಿತ್ತು. 1999ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಪರಿಚಯವಾದ ನಂತರ 2022 ರಲ್ಲಿ ಭಾರತದ ಮಹಿಳಾ ತಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು. 2022 ರಲ್ಲಿ ಕೌರ್ ಏಕದಿನದಲ್ಲಿ 754 ರನ್ ಗಳಿಸಿದ್ದು, ಅದರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 143 ರನ್ ಸಹ ಸೇರಿದೆ. ಟಿ20ಯಲ್ಲಿ ಇವರು 524ರನ್ ಗಳಿಸಿದ್ದಾರೆ.
ಕಳೆದ ವರ್ಷವನ್ನು ಸೂರ್ಯ ಕುಮಾರ್ ಯಾದವ್ ಅವರಿಗೆ ಗೋಲ್ಡನ್ ಇಯರ್ ಎಂದೇ ಕೆರೆಯಬಹುದು. 2022 ರ ಟಿ 20 ವಿಶ್ವಕಪ್‌ನಲ್ಲಿ ಮೂರು, ಕಳೆದ ವರ್ಷ ಭಾರತ ಆಡಿರುವ 40 ಪಂದ್ಯಗಳಲ್ಲಿ 28 ಗೆಲುವಿಗೆ ಯಾದವ್ ಕಾರಣರಾಗಿದ್ದರು. 2022ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ 55 ಎಸೆತಗಳಲ್ಲಿ 117 ರನ್ ಗಳಿಸಿದ್ದು, ಅವರ ಚೊಚ್ಚಲ ಟಿ20 ಶತಕವಾಗಿದೆ. 187.43 ಸ್ಟ್ರೈಕ್ ರೇಟ್ನಲ್ಲಿ 1164 ಗಳಿಸಿದ್ದಾರೆ. ಅಲ್ಲದೇ ಐಸಿಸಿ ನೀಡುವ ಟಿ20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.