ಕೇಪ್ಟೌನ್: ಬ್ಯಾಟಿಂಗ್ನಲ್ಲಿ ವಿಫಲರಾದರೂ ಬೌಲರ್ಗಳ ಅದ್ಭುತ ಪ್ರದರ್ಶನದಿಂದ ಭಾರತ ತಂಡ ಸರಣಿಯಲ್ಲಿ ಮೇಲುಗೈ ಸಾಧಿಸುತ್ತಿದೆ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅತಿಥೇಯರನ್ನು 210 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಕೊಹ್ಲಿ ಪಡೆಯ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ವೇಗಿ ಬುಮ್ರಾ ಪ್ರದರ್ಶನ ಅತಿಥೇಯ ತಂಡಕ್ಕೆ ದೊಡ್ಡ ತಲೆನೋವು ತಂದಿದೆ ಎಂದು ತಿಳಿಸಿದ್ದಾರೆ.
ಭಾರತ 223ಕ್ಕೆ ಆಲೌಟ್ ಆದ ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಬುಮ್ರಾ ಆರಂಭದಲ್ಲೇ ಆಘಾತ ನೀಡಿದ್ದರು. ಅವರು ಮೊದಲ ದಿನವೇ ಕಳೆದ ಪಂದ್ಯದ ಹೀರೋ ಡೀನ್ ಎಲ್ಗರ್ ವಿಕೆಟ್ ಪಡೆದಿದ್ದರು.
ಎರಡನೇ ದಿನವೂ ಅತಿಥೇಯರ ಪಾಲಿಗೆ ಸಿಂಹಸ್ವಪ್ನರಾದ ಬುಮ್ರಾ ತಮ್ಮ ಮೊದಲ ಓವರ್ನಲ್ಲಿ ಐಡೆನ್ ಮಾರ್ಕ್ರಮ್ ವಿಕೆಟ್ ಪಡೆದರು. ಇನ್ನಿಂಗ್ಸ್ ಪೂರ್ತಿ ಹರಿಣ ಪಡೆಯನ್ನು ಕಾಡಿದ ಅವರು ಒಟ್ಟಾರೆ 42 ರನ್ ನೀಡಿ 5 ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ನಂತರ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿನ ಸಂವಾದದಲ್ಲಿ ಮಾತನಾಡುವ ವೇಳೆ ಗವಾಸ್ಕರ್ಸ" ಸರಣಿಯನ್ನು ನಿರ್ಣಯಿಸುವ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಎಚ್ಚೆರಿಕೆ ವಹಿಸುತ್ತಾರೆ ಎಂದು ಹೇಳಿದ್ದಾರೆ.