ಮುಂಬೈ :ಶನಿವಾರ ವಿರಾಟ್ ಕೊಹ್ಲಿ 7 ವರ್ಷದ ತಮ್ಮ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಹ್ಲಿಯ ಈ ದಿಢೀರ್ ನಿರ್ಧಾರದಿಂದ ಬಿಸಿಸಿಐ, ಕ್ರಿಕೆಟಿಗರಲ್ಲದೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಇದೀಗ ಅವರ ಸ್ಥಾನಕ್ಕೆ ಸೂಕ್ತ ಯಾರು ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ವಿಕೆಟ್ ಕೀಪರ್ ರಿಷಭ್ ಪಂತ್ ಹೆಸರನ್ನು ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ.
ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 1-2ರಿಂದ ಸರಣಿಯನ್ನು ಕಳೆದುಕೊಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ ಏಕಾಏಕಿ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಸ್ಥಾನಕ್ಕೆ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವಾರು ಅನುಭವಿಗಳ ಹೆಸರು ಕೇಳಿ ಬರುತ್ತಿವೆ. ಆದರೆ, ಗವಾಸ್ಕರ್ ಮಾತ್ರ ಭಾರತೀಯ ಕ್ರಿಕೆಟ್ನ ದೀರ್ಘಕಾಲದವರೆಗೆ ನಾಯಕನಾಗಿ ಉಳಿಯಲು ನೆರವಾಗುತ್ತದೆ ಎಂದು ವಿಕೆಟ್ ಕೀಪರ್ ಪಂತ್ ಹೆಸರನ್ನು ಸೂಚಿಸಿದ್ದಾರೆ.
ಕೊಹ್ಲಿ ನಿವೃತ್ತಿ ನಂತರ ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗವವರು ಯಾರು ಎಂಬ ಚರ್ಚೆ ನಡೆಯುತ್ತಿದೆ. ಭಾರತ ತಂಡದ ಮೂರು ವಿಭಾಗದಲ್ಲಿ ನೇರ ಆಯ್ಕೆಯಾಗಿರುವ ಆಟಗಾರನಿಗೆ ಈ ಜವಾಬ್ದಾರಿ ನೀಡಬೇಕು. ನನ್ನನ್ನು ಕೇಳಿದರೆ, ರಿಷಭ್ ಪಂತ್ ಭಾರತ ತಂಡದ ಮುಂದಿನ ನಾಯಕನಾಗಬೇಕೆಂದು ಹೇಳುತ್ತೇನೆ ಎಂದು ಗವಾಸ್ಕರ್ ಹೇಳಿದ್ದಾರೆ.