ಕರ್ನಾಟಕ

karnataka

ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ ಲಂಕಾ ಬೌಲರ್​ ಉದಾನ್​ - ಶ್ರೀಲಂಕಾ ಕ್ರಿಕೆಟ್​ ಮಂಡಳಿ

ಮಧ್ಯಮ ಎಡಗೈ ವೇಗಿ ಇಸುರ್​ ಉದಾನ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದು, ಶ್ರೀಲಂಕಾ ಕ್ರಿಕೆಟ್​ ಮಂಡಳಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

Sri Lanka pacer Isuru Udana
Sri Lanka pacer Isuru Udana

By

Published : Jul 31, 2021, 4:44 PM IST

ಕೊಲಂಬೊ: ಶ್ರೀಲಂಕಾದ ಮಧ್ಯಮ ವೇಗದ ಬೌಲರ್​ ಇಸುರು ಉದಾನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಯುವ ಕ್ರಿಕೆಟರ್ಸ್​ಗೆ ಹಾದಿ ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇಸುರ್​ ಉದಾನ್​ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಲಂಕಾ ಕ್ರಿಕೆಟ್​ ತಿಳಿಸಿದೆ.

ಶ್ರೀಲಂಕಾ ತಂಡದ ಪರ 21 ಏಕದಿನ ಹಾಗೂ 35 ಟಿ - 20 ಪಂದ್ಯಗಳನ್ನಾಡಿರುವ ಈ ಪ್ಲೇಯರ್​ 45 ವಿಕೆಟ್​ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಭಾರತದ ವಿರುದ್ಧ ನಡೆದ ಟಿ-20 ಸರಣಿಯಲ್ಲೂ ಇವರು ಭಾಗಿಯಾಗಿದ್ದರು. ಆದರೆ, ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದರು.

ಅಂಡರ್​ - 19 ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ 2009ರಲ್ಲಿ ಲಂಕಾ ತಂಡಕ್ಕೆ ಸೇರ್ಪಡೆಯಾಗಿದ್ದ ಇವರಿಗೆ ಟಿ - 20 ವಿಶ್ವಕಪ್​ನಲ್ಲಿ ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಗಾಯದ ಸಮಸ್ಯೆಗೊಳಗಾಗಿ ತಂಡದಿಂದ ಹೊರಗುಳಿದಿದ್ದರು. ಇದಾದ ಬಳಿಕ 2018ರಲ್ಲಿ ಮತ್ತೊಮ್ಮೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು.

ಇದನ್ನೂ ಓದಿರಿ: ಆನ್​ಲೈನ್​ ಕ್ಲಾಸ್​ಗೆ ಮೊಬೈಲ್​ ಕೂಡಿಸಿದ್ರೆ, ಗೇಮ್​​ ಆಡಿ 40 ಸಾವಿರ ಕಳೆದುಕೊಂಡ: ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ!

33 ವರ್ಷದ ಎಡಗೈ ವೇಗಿ ಇಸುರ್ ಉದಾನ್​, ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಕೂಡ ಆಡಿದ್ದಾರೆ.

ABOUT THE AUTHOR

...view details