ನವದೆಹಲಿ: ಐರ್ಲೆಂಡ್ ಎದುರು ಭಾರತೀಯ ವನಿತೆಯರು ವರುಣನ ಅಡ್ಡಿಯ ನಡುವೆಯೂ ಗೆಲುವು ಸಾಧಿಸಿದ್ದು, ಬಿ ಗುಂಪಿನಿಂದ ಸೆಮೀಸ್ಗೆ ಪ್ರವೇಶಿಸಿದೆ. ಮಳೆಯ ಪರಿಣಾಮ 5 ರನ್ನಿಂದ ಐರ್ಲೆಂಡ್ ಸೋಲನುಭವಿಸಿತು. ಬಿರುಸಿನ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ಮಂಧಾನ 87 ರನ್ ಗಳಿಸಿದ್ದಾರೆ. ಈ ಮೂಲಕ ಮಂಧಾನ 2023ರ ಟಿ20 ವಿಶ್ವಕಪ್ನ ಇದುವರೆಗಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ಅವರು ಮೂರು ಪಂದ್ಯದಿಂದ 54,37 ಮತ್ತು 55 ರನ್ನಿಂದ ಒಟ್ಟು 146 ರನ್ಗಳಿಸಿದ್ದಾರೆ. ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ನಂತರದ ಮೂರು ಪಂದ್ಯದಲ್ಲಿ 87, 10 ಮತ್ತು 52 ರನ್ನಿಂದ ಒಟ್ಟು 149 ಮೊತ್ತ ಕಲೆ ಹಾಕಿದ್ದಾರೆ. ಈ ಮೂಲಕ 2023ರ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
150 ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದ ದಾಖಲೆ:ನಿನ್ನೆ ನಾಯಕಿ ಹರ್ಮನ್ಪ್ರಿತ್ ಕೌರ್ ಅವರು ಅಂತಾರಾಷ್ಟ್ರೀಯ 150 ಪಂದ್ಯವನ್ನು ಆಡಿದರು. ಈ ಮೂಲಕ ಪುರುಷ ಮತ್ತು ಮಹಿಳಾ ವಿಭಾಗದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 150 ಪಂದ್ಯ ಆಡಿದ ಮೊದಲ ಪ್ಲೇಯರ್ ಎಂಬ ದಾಖಲೆ ಬರೆದರು. ಟೀ ಇಂಡಿಯಾ ನಾಯಕ ರೋಹಿತ್ ಶರ್ಮಾ 148 ಪಂದ್ಯಗಳನ್ನು ಆಡಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. 143 ಟಿ20 ಪಂದ್ಯಗಳನ್ನು ಆಡಿರುವ ನ್ಯೂಜಿಲ್ಯಾಂಡ್ನ ಮಾಜಿ ನಾಯಕಿ ಸೂಝಿ ಬೇಟ್ಸ್ ಮೂರನೇ ಸ್ಥಾನದಲ್ಲಿದ್ದಾರೆ.