ಕರ್ನಾಟಕ

karnataka

ಐಸಿಸಿಯ 'ತಿಂಗಳ ಆಟಗಾರ ಪ್ರಶಸ್ತಿ'ಗೆ ಶ್ರೇಯಸ್, ಮಿಥಾಲಿ, ದೀಪ್ತಿ ನಾಮನಿರ್ದೇಶನ

By

Published : Mar 9, 2022, 3:55 PM IST

ಕಳೆದ ತಿಂಗಳಲ್ಲಿ ಆಟಗಾರರು ನೀಡಿದ ಪ್ರದರ್ಶನದ ಮೇಲೆ ಐಸಿಸಿ ನೀಡುವ ತಿಂಗಳ ಆಟಗಾರ ಪ್ರಶಸ್ತಿಗೆ ಭಾರತ ತಂಡದ ಆಟಗಾರ ಶ್ರೇಯಸ್​ ಅಯ್ಯರ್​, ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್​, ಆಲ್​ರೌಂಡರ್​ ದೀಪ್ತಿ ಶರ್ಮಾ ನಾಮನಿರ್ದೇಶನಗೊಂಡಿದ್ದಾರೆ.

Player of the Month
ತಿಂಗಳ ಆಟಗಾರ ಪ್ರಶಸ್ತಿ

ದುಬೈ:ಫೆಬ್ರವರಿ ತಿಂಗಳಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಭಾರತ ಪುರುಷರ ಕ್ರಿಕೆಟ್‌ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್, ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಐಸಿಸಿಯ ‘ತಿಂಗಳ ಆಟಗಾರ ಪ್ರಶಸ್ತಿ'ಗೆ ನಾಮನಿರ್ದೇಶನವಾಗಿದ್ದಾರೆ.

ಇದಲ್ಲದೇ, ಪುರುಷರ ವಿಭಾಗದಲ್ಲಿ ಯುಎಇ ಬ್ಯಾಟರ್ ವೃತ್ಯ ಅರವಿಂದ್ ಮತ್ತು ನೇಪಾಳದ ದೀಪೇಂದ್ರ ಸಿಂಗ್ ಐರಿ ಕೂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್​ ಮತ್ತು ಆಲ್​ರೌಂಡರ್​ ದೀಪ್ತಿ ಶರ್ಮಾ ಅವರೊಂದಿಗೆ ನ್ಯೂಜಿಲೆಂಡ್​ನ ಸ್ಟಾರ್​ ಆಲ್‌ರೌಂಡರ್ ಅಮೆಲಿಯಾ ಕೆರ್ ಕೂಡ ಪ್ರಶಸ್ತಿ ಸೆಣಸಾಟದಲ್ಲಿದ್ದಾರೆ.

ಪ್ರತಿಭಾನ್ವಿತ ಆಟಗಾರ ಶ್ರೇಯಸ್​ ಅಯ್ಯರ್​

ಫೆಬ್ರವರಿ ತಿಂಗಳಲ್ಲಿ ಶ್ರೇಯಸ್​ ಅಯ್ಯರ್ ಭಾರತ ತಂಡಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಏಕದಿನದಲ್ಲಿ ಸ್ಥಾನ ಪಡೆದು, 80 ರನ್ ಗಳಿಸಿದ್ದಲ್ಲದೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಗಳಿಸಿದ್ದರು. ಟಿ-20ಯಲ್ಲೂ ಕೂಡ 16 ಎಸೆತಗಳಲ್ಲಿ 25 ರನ್​ ಸಿಡಿಸಿ ಮಿಂಚಿದ್ದರು.

ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್​

ಇನ್ನು ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಅಯ್ಯರ್, ಮೂರೂ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ವಿಕ್ರಮ ಮೆರೆದಿದ್ದರು. 174.35 ರ ಸ್ಟ್ರೈಕ್ ರೇಟ್‌ನಲ್ಲಿ 204 ರನ್‌ಗಳನ್ನು ಚಚ್ಚಿದ್ದರು. ಅಲ್ಲದೇ, ಈ ಪಂದ್ಯಾವಳಿಯಲ್ಲಿ ಅಯ್ಯರ್​ ಸರಣಿ ಶ್ರೇಷ್ಠ ಆಟಗಾರನಾಗಿ ಕೂಡ ಹೊರಹೊಮ್ಮಿದ್ದರು.

ಇನ್ನು ಮಹಿಳಾ ವಿಭಾಗದಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್​ 77.33 ಸರಾಸರಿಯೊಂದಿಗೆ 3 ಅರ್ಧಶತಕ ಒಳಗೊಂಡಂತೆ 232 ರನ್‌ ಗಳಿಸಿದ್ದರು. ಇದು ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.

ಆಲ್​ರೌಂಡರ್​ ದೀಪ್ತಿ ಶರ್ಮಾ

ಇದಲ್ಲದೇ, ಇದೇ ಸರಣಿಯಲ್ಲಿ ಭಾರತದ ಆಲ್​ರೌಂಡರ್ ದೀಪ್ತಿ ಶರ್ಮಾ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರು. ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು (10) ಪಡೆದಿದ್ದಲ್ಲದೇ, 116 ರನ್‌ ಬಾರಿಸಿದ್ದರು.

ಇದನ್ನೂ ಓದಿ:ಟೆಸ್ಟ್​ ರ್ಯಾಂಕಿಂಗ್​: ರಾಕ್​ಸ್ಟಾರ್​ ಜಡೇಜಾ ನಂ.1 ಆಲ್​ರೌಂಡರ್,​ ಬ್ಯಾಟಿಂಗ್​ನಲ್ಲಿ ವಿರಾಟ್​ಗೆ 5ನೇ ಸ್ಥಾನ

ABOUT THE AUTHOR

...view details